ಉಡುಪಿ : ಅಧಿಕಾರಿಗಳ ಕಣ್ತಪ್ಪಿಸಿ ಬೆಳಗಾವಿಗೆ ಹೊರಟಿದ್ದ ಖಾಸಗಿ ಬಸ್ ಉಡುಪಿಯಲ್ಲಿ ನಗರ ಪೊಲೀಸರಿಂದ ಸೀಜ್ ಆಗಿದೆ.
ರೋಗಿಯನ್ನು ಸಾಗಿಸುವ ನೆಪದಲ್ಲಿ ಮಂಗಳೂರಿನಿಂದ ಖಾಸಗಿ ಬಸ್ ಬೆಳಗಾವಿಗೆ ಹೊರಟಿತ್ತು. ಓರ್ವ ರೋಗಿ, 11 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್‌ನ ಉಡುಪಿ ನಗರದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವೇಳೆ ಸಂಶಯಗೊಂಡು ನಗರ ಚೆಕ್ಪೋಸ್ಟ್ನಲ್ಲಿ ವಶಕ್ಕೆ ಪಡೆಯಲಾಗಿದೆ.
ಉಡುಪಿ ನಗರ ಠಾಣಾ ಪೊಲೀಸರಿಂದ ತನಿಖೆ ನಡೆಯುತ್ತಿದ್ದು, ಬಸ್ ಸಂಚಾರಕ್ಕೆ ಅವಕಾಶವಿಲ್ಲದಿದ್ದರೂ ಪ್ರಯಾಣಿಕರ ಸಾಗಾಟ ಹಿನ್ನೆಲೆ ಕೇಸ್ ದಾಖಲಾಗಿದೆ. ರೋಗಿಯನ್ನು ಕಳುಹಿಸಲು ಬದಲಿ ವ್ಯವಸ್ಥೆಗೆ ಪೊಲೀಸರು ಮುಂದಾಗಿದ್ದಾರೆ.