ETV Bharat / state

ಉಡುಪಿ: ಜೈಲಿನಲ್ಲಿ ಕೈದಿ ಆತ್ಮಹತ್ಯೆ - udupi sub jail

ವಿಚಾರಣಾ ದಿನದಂದು ಕೈದಿಯೊಬ್ಬರು ಜೈಲಿನ ಕೊಠಡಿಯಲ್ಲಿ ಪಂಚೆಯಿಂದ ನೇಣು ಬಿಗಿದು ಅತ್ಮಹತ್ಯೆಗೆ ಶರಣಾಗಿದ್ದಾರೆ.

prisoner commits suicide in jail
ಉಡುಪಿ: ಜೈಲಿನಲ್ಲಿ ಕೈದಿ ಆತ್ಮಹತ್ಯೆ..
author img

By

Published : Dec 11, 2022, 3:34 PM IST

Updated : Dec 11, 2022, 4:23 PM IST

ಉಡುಪಿ: ಉಡುಪಿ ಜಿಲ್ಲೆಯ ಸಬ್ ಜೈಲಿನಲ್ಲಿ ಸದಾನಂದ ಸೇರಿಗಾರ್ ಎಂಬ ಕೈದಿ ವಿಚಾರಣ ದಿನದಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಮುಂಜಾನೆ ಐದು ಗಂಟೆಗೆ 20 ಮಂದಿ ಕೈದಿಗಳಿದ್ದ ಕೊಠಡಿಯಲ್ಲಿ ಪಂಚೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆಯನ್ನು ಸಹ ಕೈದಿಗಳು ಗಮನಿಸಿ ನೇಣಿನ ಕುಣಿಕೆಯಿಂದ ಬಿಡಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಆರೋಪಿ ಸಾವನ್ನಪ್ಪಿದ್ದಾರೆ. ಮೃತ ಆರೋಪಿ ಕಾರ್ಕಳ ಮೂಲದ ಸದಾನಂದ ಸೇರಿಗಾರ್ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಸಿನಿಮಾ ಮಾದರಿಯ ಪ್ರಕರಣ: ಸಿನಿಮಾ ಮಾದರಿಯಲ್ಲಿ ಕೊಲೆ ಮಾಡಿ ಗಮನಸೆಳೆದಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸದಾನಂದ ಸೇರಿಗಾರ್​, ಸುಟ್ಟ ಕಾರಿನಲ್ಲಿ ತಾನೇ ಸತ್ತಿರುವುದಾಗಿ ಬಿಂಬಿಸಲು ಹೊರಟು ಬಂಧಿಯಾಗಿದ್ದರು.

ಇದನ್ನೂ ಓದಿ: Kurup Movie: ಕ್ರಿಮಿನಲ್​ಗಳಲ್ಲೇ ಕ್ರಿಮಿನಲ್​ನ ಸ್ಟೋರಿ ಇದು: ಚಿತ್ರದ ಕತೆಯ ಹಿಂದಿನ ಕತೆಯೇ ರೋಚಕ!

Last Updated : Dec 11, 2022, 4:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.