ETV Bharat / state

ನದಿಯಲ್ಲಿ ತೇಲಿ ಬಂತು ಬಳಕೆಯಾದ ಪಿಪಿಇ ಕಿಟ್​.. ಜನರಲ್ಲಿ ಹೆಚ್ಚಿದ ಆತಂಕ!!

author img

By

Published : Apr 29, 2020, 1:33 PM IST

ಮೇಲ್ನೋಟಕ್ಕೆ ಇದು ಬಳಸಿ ಎಸೆದ ಕಿಟ್​ನಂತೆ ಕಾಣಿಸುತ್ತಿದೆ. ಸ್ಥಳೀಯ ಆಶಾ ಕಾರ್ಯಕರ್ತೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಡಂಗಳ ನದಿಯ ಸೇತುವೆಯ ಮೇಲ್ಭಾಗದಿಂದ ಆ್ಯಂಬುಲೆನ್ಸ್ ಚಾಲಕರು ಇದನ್ನು ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ppe-kit
ಪಿಪಿಇ ಕಿಟ್

ಉಡುಪಿ : ಇಲ್ಲಿನ ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಂಗಳ ನದಿಯಲ್ಲಿ ವೈದ್ಯಕೀಯ ಸಿಬ್ಬಂದಿ ಬಳಸುವ ಪಿಪಿಇ ಕಿಟ್ ಪತ್ತೆಯಾಗಿದೆ. ಇದು ಹಲವಾರು ಅನುಮಾನಕ್ಕೆ ಕಾರಣವಾಗಿದೆ.

ಕೊರೊನಾ ಸೋಂಕಿತರನ್ನು ಚಿಕಿತ್ಸೆಗೊಳಪಡಿಸುವಾಗ ಈ ವಿಶೇಷ ಕಿಟ್ ಧರಿಸಲಾಗುತ್ತದೆ. ಉಪಯೋಗಿಸಿದ ಬಳಿಕ ಕಿಟ್‌ನ ಅತ್ಯಂತ ಎಚ್ಚರಿಕೆಯಿಂದ ವಿಲೇವಾರಿ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನವಿದೆ. ವೈರಾಣುಗಳ ಸಂಪರ್ಕಕ್ಕೆ ಬರುವ ಈ ಕಿಟ್‌ಗಳನ್ನು ಎಲ್ಲೆಂದರಲ್ಲಿ ಎಸೆದರೆ ರೋಗ ಹರಡುವ ಸಾಧ್ಯತೆಯಿದೆ. ಗ್ರಾಮಸ್ಥರು ಈ ಘಟನೆಯಿಂದ ಆತಂಕಕ್ಕೊಳಗಾಗಿದ್ದಾರೆ.

ನದಿಯಲ್ಲಿ ತೇಲಿ ಬಂತು ಪಿಪಿಇ ಕಿಟ್..

ಈ ನದಿಯ ನೀರನ್ನು ಬಳಸುತ್ತಿದ್ದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.