ETV Bharat / state

ಜಾನುವಾರು ಸಾಗಾಟದಲ್ಲಿ ಪೊಲೀಸರೇ ಭಾಗಿ: ಇಬ್ಬರ ಬಂಧನ, ನಾಲ್ವರಿಗಾಗಿ ಹುಡುಕಾಟ

ಉಡುಪಿಯಲ್ಲಿ ನಡೆಯುತ್ತಿರುವ  ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಇದೀಗ ಇಬ್ಬರು ಪೊಲೀಸರನ್ನು ಬಂಧಿಸಿದ್ದು, ನಾಲ್ವರು ತಲೆಮರೆಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವವರ ಬಂಧನಕ್ಕೆ ಬಲೆ ಬೀಸಲಾಗಿದೆ.

ನಿಶಾ ಜೇಮ್ಸ್
author img

By

Published : Jul 18, 2019, 6:14 PM IST

ಉಡುಪಿ: ಕರಾವಳಿಯಲ್ಲಿ ನಡೆಯುತ್ತಿರುವ ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಇದೀಗ ಇಬ್ಬರು ಪೊಲೀಸರನ್ನು ಬಂಧಿಸಿದ್ದು, ನಾಲ್ವರು ತಲೆಮರೆಸಿಕೊಂಡಿದ್ದಾರೆ.

ಅಕ್ರಮವಾಗಿ ಹಣ ಪಡೆದು ಜಾನುವಾರುಗಳ ಸಾಗಾಟಕ್ಕೆ ಅನುವು ಮಾಡಿಕೊಡುತ್ತಿದ್ದ ಪ್ರಕರಣದ ಹಿನ್ನೆಲೆಯಲ್ಲಿ ಮಲ್ಪೆಯ ಕರಾವಳಿ ಕಾವಲು ಪಡೆಯಲ್ಲಿ ಸಿಬ್ಬಂದಿಯಾದ ಸಂತೋಷ್ ಶೆಟ್ಟಿ ಹಾಗೂ ಮಂಕಿ ಪೊಲೀಸ್ ಠಾಣೆ ಸಿಬ್ಬಂದಿ ವಿನೋದ್ ಗೌಡ ಬಂಧಿತರಾಗಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಠಾಣೆಯ ನಾಲ್ವರು ಪೊಲೀಸರ ಹೆಸರು ಕೇಳಿಬಂದಿದ್ದು, ಅವರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಜಾನುವಾರು ಸಾಗಾಟದಲ್ಲಿ ಪೊಲೀಸರೇ ಭಾಗಿ: ಇರ್ವರ ಬಂಧನ ನಾಲ್ವರ ಹುಡುಕಾಟ

ಸದ್ಯ ಬಂಧಿತ ಇಬ್ಬರು ಪೊಲೀಸರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹದಿನೈದು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನು ನಾಲ್ವರು ಪೊಲೀಸ್ ಸಿಬ್ಬಂದಿ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.

ಆರೋಪಿಗಳಾದ ಕಾರಿನ ಚಾಲಕ ಶಿವಾನಂದ ಹಾಗೂ ಮಾರುತಿ ನಾರಾಯಣ ನಾಯ್ಕ, ಲಾರಿ ಚಾಲಕ ಸೈನುದ್ದೀನ್ ಹಾಗೂ ಲಾರಿಯಲ್ಲಿದ್ದ ಗಣೇಶನ್, ಹಮೀದ್‌ ಸಿ.ಹೆಚ್., ಸಮೀರ್ ಎನ್ನುವರನ್ನು ಬಂಧಿಸಲಾಗಿತ್ತು. 13 ಕೋಣ, 7 ಎಮ್ಮೆಗಳನ್ನು ಪೊಲೀಸರ ತಂಡ ರಕ್ಷಿಸಿತ್ತು. 12 ಲಕ್ಷ ಮೌಲ್ಯದ ಲಾರಿ, 2 ಲಕ್ಷ ಮೌಲ್ಯದ ಇಂಡಿಕಾ ಕಾರನ್ಮು ಕೂಡ ವಶಕ್ಕೆ ಪಡೆಯಲಾಗಿತ್ತು. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಪೊಲೀಸರು ಭಾಗಿಯಾಗಿರುವ ವಿಷಯ ಹೊರಬಿದ್ದಿದೆ.

ಇತ್ತ ಎಸ್ಪಿ ನಿಶಾ ಜೇಮ್ಸ್ ಅಕ್ರಮ ಜಾನುವಾರು ಕಳ್ಳತನ ಹಾಗೂ ಸಾಗಾಟ ತಡೆಗೆ ವಿವಿಧ ಕ್ರಮಗಳನ್ನು ಕೈಗೊಂಡಿದ್ದು, ಚೆಕ್ ಪೋಸ್ಟ್, ಗಸ್ತು ವ್ಯವಸ್ಥೆ, ಎಂ.ಒ.ಬಿ. ಪರೇಡ್ ಸೇರಿದಂತೆ ಇತರೆ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಆದರೆ, ಅವರದ್ದೇ ಇಲಾಖೆಯ ಕೆಲವು ಸಿಬ್ಬಂದಿ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದು ಪ್ರಜ್ಞಾವಂತರನ್ನು ಬೆಚ್ಚಿಬೀಳಿಸಿದೆ.

Intro:

ಆಂಕರ್
ಬೇಲಿಯೇ ಎದ್ದು ಹೊಲ ಮೈದ್ರೆ ಹೇಗೆ.. ಇದೇ ಪರಿಸ್ಥಿತಿ ಉಡುಪಿ ಪೋಲೀಸ್ ಇಲಾಖೆಯಲ್ಲಿ ನಡೆದಿದೆ. ಕರಾವಳಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಗೋಸಾಗಾಟದಲ್ಲಿ ಪೋಲೀಸರೇ ಭಾಗಿಯಾಗಿರುವ ಆತಂಕಕಾರಿ ಘಟನೆ ಉಡುಪಿಯಲ್ಲಿ ನಡೆದಿದೆ. ಗೋಕಳ್ಳರನ್ನು ಹಿಡಿದು ಕಾನೂನು ರಕ್ಷಣೆ ಮಾಡಬೇಕಾದ ಪೋಲೀಸರೇ ಅಕ್ರಮ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು ನಾಲ್ವರು ತಲೆಮರೆಸಿಕೊಂಡಿದ್ದಾರೆ. ಜಿಲ್ಲಾ ಎಸ್ಪಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ

ವಾ. ಕರಾವಳಿಯಲ್ಲಿ ನಿತ್ಯ ಅಕ್ರಮ ಗೋಸಾಗಾಟದ್ದೇ ಸದ್ದು.ಪೊಲೀಸರಿಗೂ ಇದೇ ದೊಡ್ಡ ತಲೆನೋವು ಕೂಡ.ಆದರೆ ಉಡುಪಿಯ ಕೋಟ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಗೋಸಾಗಾಟಗಾರರನ್ನು ಬಂಧಿಸಿ ತನಿಖೆಗೊಳಪಡಿಸಿದಾಗ ಖುದ್ದು ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.ಯಾಕೆಂದರೆ ಅಕ್ರಮ ಗೋಸಾಗಾಟಕ್ಕೆ ಪೊಲೀಸರೇ ಕಾವಲುಗಾರರಾಗಿದ್ದರು.ಹೌದು...ದುಡ್ಡಿಗಾಗಿ ಪೊಲೀಸರೇ ಅಕ್ರಮ‌ ಗೋಸಾಗಾಟಗಾರರ ಜತೆ ಶಾಮೀಲಾಗಿ ಜೈಲುಪಾಲಾಗಿರುವ ಅಪರೂಪದ ಪ್ರಕರಣ ಇದು.
ಮಲ್ಪೆಯ ಕರಾವಳಿ ಕಾವಲುಪಡೆಯಲ್ಲಿ ಸಿಬ್ಬಂದಿಯಾದ ಸಂತೋಷ್ ಶೆಟ್ಟಿ ಹಾಗೂ ಮಂಕಿ ಪೊಲೀಸ್ ಠಾಣೆ ಸಿಬ್ಬಂದಿ ವಿನೋದ್ ಗೌಡ ಬಂಧಿತ ಪೊಲೀಸರು.

ಬೈಟ್ ,ಎಸ್ಪಿ ನಿಶಾ ಜೇಮ್ಸ್

ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಠಾಣೆಯ ನಾಲ್ವರು ಪೊಲೀಸರ ಹೆಸರು ಕೇಳಿಬಂದಿದ್ದು, ಸದ್ಯ ಅವರೆಲ್ಲ ತಲೆಮರೆಸಿಕೊಂಡಿದ್ದಾರೆ.
ಜು.12 ಬೆಳಿಗ್ಗೆನ ಜಾವ ಕೋಟ ಪಿ‌ಎಸ್‌ಐ ನಿತ್ಯಾನಂದ ಗೌಡ ಖಚಿತ ವರ್ತಮಾನದ ಮೇರೆಗೆ ಜಾನುವಾರು ಸಾಗಾಟ ಮಾಡುತ್ತಿದ್ದ ಸಾಸ್ತಾನ ಟೋಲ್ ಗೇಟ್ ಬಳಿ ಕಾರ್ಯಾಚರಣೆ ನಡೆಸಿದ್ದರು. ಆರೋಪಿಗಳಾದ ಕಾರಿನ ಚಾಲಕ ಶಿವಾನಂದ ಹಾಗೂ ಮಾರುತಿ ನಾರಾಯಣ ನಾಯ್ಕ, ಲಾರಿ ಚಾಲಕ ಸೈನುದ್ದೀನ್ ಹಾಗೂ ಲಾರಿಯಲ್ಲಿದ್ದ ಗಣೇಶನ್, ಹಮೀದ್‌ಸಿ.ಹೆಚ್. , ಸಮೀರ್ ಎನ್ನುವರನ್ನು ಬಂಧಿಸಲಾಗಿತ್ತು. ೬೫ ಸಾವಿರ ಮೌಲ್ಯದ 13 ಕೋಣ, 35 ಸಾವಿರ ಮೌಲ್ಯದ 7 ಎಮ್ಮೆಗಳನ್ನು ಪೊಲೀಸರ ತಂಡ ರಕ್ಷಿಸಿತ್ತು. 12 ಲಕ್ಷ ಮೌಲ್ಯದ ಲಾರಿ, 2 ಲಕ್ಷ ಮೌಲ್ಯದ ಇಂಡಿಕಾ ಕಾರನ್ಮು ಕೂಡ ವಶಕ್ಕೆ ಪಡೆಯಲಾಗಿತ್ತು.ಆದರೆ ಈ ಪ್ರಕರಣದಲ್ಲಿ ಪೊಲೀಸರು ಶಾಮೀಲಾದ ಬಗ್ಗೆ ಆರೋಪಿಗಳು ಬಾಯಿ ಬಿಟ್ಟಾಗ ಪೊಲೀಸರೇ ಶಾಕ್ ಗೊಳಗಾಗಿದ್ದಾರೆ.ಸದ್ಯ ಬಂಧಿತ ಇಬ್ಬರು ಪೊಲೀಸರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹದಿನೈದು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನು ನಾಲ್ವರು ಪೊಲೀಸ್ ಸಿಬ್ಬಂದಿಗಳು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಬಲೆಬೀಸಲಾಗಿದೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಜರಂಗದಳ ಮುಖಂಡ, ಇದು ನಿಜಕ್ಕೂ ಆತಂಕಕಾರಿ ಸಂಗತಿ.ಪೊಲೀಸರೇ ಅಕ್ರಮ‌ ಗೋಸಾಗಾಟದಲ್ಲಿ ಭಾಗವಹಿಸಿರುವುದು ಅಕ್ಷಮ್ಯ.ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದೆ.

ಜಿಲ್ಲಾದ್ಯಂತ ನಡೆಯುತ್ತಿರುವ ಅಕ್ರಮ ಹಾಗೂ ಅಪರಾಧ ಚಟುವಟಿಕೆಗಳಲ್ಲಿ ಪೊಲೀಸರು ನೇರವಾಗಿ ಹಾಗೂ ಪರೋಕ್ಷವಾಗಿ ಭಾಗಿಯಾಗುತ್ತಿರುವುದು ನಾಗರಿಕರನ್ನು ಆತಂಕಕ್ಕೀಡು ಮಾಡಿದೆ. ಇತ್ತ ಎಸ್ಪಿ ನಿಶಾ ಜೇಮ್ಸ್ ಅಕ್ರಮ ಜಾನುವಾರು ಕಳ್ಳತನ ಹಾಗೂ ಸಾಗಾಟ ತಡೆಗೆ ವಿವಿಧ ಕ್ರಮಗಳನ್ನು ಕೈಗೊಂಡಿದ್ದು ಚೆಕ್ ಪೋಸ್ಟ್, ಗಸ್ತು ವ್ಯವಸ್ಥೆ, ಎಂ.ಒ.ಬಿ. ಪರೇಡ್ ಸೇರಿದಂತೆ ಕಾನೂನು ಚೌಕಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದ್ದರೂ, ಅವರದ್ದೇ ಇಲಾಖೆಯ ಕೆಲವು ಸಿಬ್ಬಂದಿಗಳು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದು ಪ್ರಜ್ನಾವಂತರನ್ನು ಬೆಚ್ಚಿ ಬೀಳಿಸಿದೆ.Body:Cattel pkgConclusion:Catel deal pkg

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.