ಭಟ್ಕಳ(ಉತ್ತರ ಕನ್ನಡ): ತಾಲ್ಲೂಕಿನ ಹೇರೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ಲಾಸ್ಟಿಕ್ ನಿಷೇಧ ಬಗ್ಗೆ ಜಾಗೃತಿ ಅಭಿಯಾನ ನಡೆಸಿದ್ರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೀದಿನಾಟಕ, ಘೋಷಣೆಗಳನ್ನು ಕೂಗುವ ಮೂಲಕ ಪ್ಲಾಸ್ಟಿಕ್‍ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದ್ರು.
ಸಹ್ಯಾದ್ರಿ ಇಕೋ ಕ್ಲಬ್ ಹಾಗೂ ಎಸ್ಡಿಎಂಸಿ ನೇತೃತ್ವದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧದ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಗ್ರಾಮದ ಮನೆಮನೆಗೆ ತೆರಳಿ ಬಟ್ಟೆಚೀಲ ವಿತರಿಸಿದ್ರು.
'ಮೈಕ್ ಇಲ್ಲದ, ಸ್ಟೇಜ್ ಇಲ್ಲದ ನಾಟಕವನ್ನು ನಾವೂ ಮಾಡುವೆವು, ಬದುಕಿಗೆ ಕನ್ನಡಿ ಹಿಡಿಯುವ ಕೆಲಸ ನಾವೆಲ್ಲರೂ ಮಾಡುವೆವು..' ಎಂದು ಹಾಡುತ್ತಾ ಗ್ರಾಮಸ್ಥರಿಗೆ ಪ್ಲಾಸ್ಟಿಕ್ ನಿಷೇಧಿಸಬೇಕು ಎಂಬುದನ್ನು ಮನವರಿಕೆ ಮಾಡಿಕೊಟ್ಟರು.
ಶಾಲೆಯ ಮುಖ್ಯಶಿಕ್ಷಕ ಕಮಲಾಕರ ಪಟಗಾರ, ಶಿಕ್ಷಕರಾದ ವಿಜಯಕುಮಾರ ನೆರ್ವೆಕರ, ಸಹಶಿಕ್ಷಕಿ ಎಸ್.ಜಿ.ಆಚಾರಿ, ಗಾಯತ್ರಿ ಮಡಿವಾಳ, ಕವಿತಾ ನಾಯ್ಕ ಈ ವೇಳೆ ಉಪಸ್ಥಿತರಿದ್ದರು.