ಉಡುಪಿ: ರಾತ್ರಿ ವೇಳೆ ಭೂತ, ಪ್ರೇತಗಳ ಸಂಚಾರ ಮಾಡುತ್ತೆ. ದೆವ್ವ ಇದೆ. ಇವೆಲ್ಲಾ ನಾವು ಕೇಳಿರಿತ್ತೀವಿ ಅದ್ರೆ ಇಲ್ಲಿ ಮಾತ್ರ ಹಗಲಿನಲ್ಲಿ ಎರಡು ಪ್ರೇತಗಳು ದಾರಿ ಉದ್ದಕ್ಕೂ ಸಂಚಾರ ನಡೆಸುತ್ತಾ ಇವೆ. ಈ ಪ್ರೇತಗಳಾವು ಅಂತ ಆಶ್ಚರ್ಯ ಪಡ್ಬೇಡಿ ಇವರು ದಸರಾ ಪ್ರಯುಕ್ತ ನವರಾತ್ರಿಯ ಪ್ರೇತ ವೇಷಧಾರಿಗಳು.
ಹೌದು, ನವರಾತ್ರಿ ಆರಂಭವಾಗುತ್ತಿದ್ದಂತೆ ಜನರು ವಿವಿಧ ವೇಷ ಧರಿಸಿ ರಸ್ತೆ ಉದ್ದಕ್ಕೂ ಮೆರವಣಿಗೆ ತೆರಳುವುದು ಸಾಮಾನ್ಯ. ಹಾಗೆ ಈ ನವರಾತ್ರಿಯ ವೇಷಧಾರಿಗಳು ಈ ಬಾರಿ ವಿಭಿನ್ನ ವೇಷಧರಿಸಿ ರಸ್ತೆಯಲ್ಲಿ ತಿರುಗಾಡಿದ್ದು, ದಿಢೀರ್ ಹತ್ತಿರದಿಂದ ಪ್ರೇತ ವೇಷಧಾರಿಗಳನ್ನು ಕಂಡು ಅದೆಷ್ಟೋ ಮಂದಿ ಹೆದರಿದ್ದಂತು ಸುಳ್ಳಲ್ಲ.