ಉಡುಪಿ: ಕೆಲ ದಿನಗಳ ಹಿಂದಷ್ಟೆ ಉಡುಪಿಯಲ್ಲಿ ನಡೆದ ಒಂಟಿ ವೃದ್ಧೆ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಆರೋಪಿಗಳನ್ನು ಗೋವಾದ ಪಣಜಿಯ ಸೆಂಟಾಕ್ರೂಸ್ ಗ್ರಾಮದಲ್ಲಿ ಬಂಧಿಸಲಾಗಿದೆ.
ಉಡುಪಿಯ ಸುಬ್ರಹ್ಮಣ್ಯ ನಗರದಲ್ಲಿ ವಾಸವಾಗಿದ್ದ ವೃದ್ಧ ಮಹಿಳೆ ರತ್ನಾವತಿ ಶೆಟ್ಟಿ ಎಂಬುವವರನ್ನು ನರಗುಂದ ನಿವಾಸಿ ಅಂಬಣ್ಣ (31) ಹಾಗೂ ಆತನ ಪತ್ನಿ ರಶೀದಾ (26) ಸೇರಿ ಕೊಲೆಗೈದಿದ್ದರು. ಬಳಿಕ ರತ್ಮಾವತಿ ಅವರ ಮೈಮೇಲಿದ್ದ ಹಾಗೂ ಮನೆಯಲ್ಲಿದ್ದ ಎರಡು ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.
ತಾವು ಬಾಡಿಗೆಗಿದ್ದ ಮನೆಯೊಡತಿಯನ್ನೇ ಕೊಲೆ ಮಾಡಿದ ಆರೋಪಿಗಳು ಗೋವಾದಲ್ಲಿ ಇರುವುದನ್ನು ಪತ್ತೆ ಹಚ್ಚಿದ ಉಡುಪಿ ಪೊಲೀಸರು ಗೋವಾ ಪೊಲೀಸರ ಸಹಾಯ ಪಡೆದು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಹಣದಾಸೆಗೆ ವೃದ್ಧೆಯನ್ನು ಕೊಲೆ ಮಾಡಿರುವುದಾಗಿ ಆರೋಪಿ ದಂಪತಿಗಳು ತಪ್ಪೊಪ್ಪಿಕೊಂಡಿದ್ದು, ಇನ್ನೂ ಹಲವು ಪ್ರಕರಣದಲ್ಲಿ ಇವರ ಹೆಸರು ಕೇಳಿ ಬಂದಿದೆ. ಆರೋಪಿಗಳನ್ನು ಉಡುಪಿಗೆ ಕರೆ ತರಲಾಗಿದ್ದು, ನ್ಯಾಯಾಂಗ ಬಂಧನದಲ್ಲಿಡಲಾಗಿದೆ.