ಉಡುಪಿ: ಸಿಡಿಲು ಬಡಿದು ಮೃತಪಟ್ಟಿದ್ದ ಯುವಕನ ಕುಟುಂಬಕ್ಕೆ ಐದು ಲಕ್ಷ ರೂ.ಗಳ ಪರಿಹಾರದ ಚೆಕ್ ಅನ್ನು ಉಡುಪಿ ಶಾಸಕ ಕೆ ರಘುಪತಿ ಭಟ್ ಹಸ್ತಾಂತರಿಸಿದರು.
ಇತ್ತೀಚೆಗೆ ಸಿಡಿಲು ಬಡಿದು ನಗರದ ಕೊಡವೂರು ವಾರ್ಡ್ ನಿವಾಸಿ ಗೌತಮ್ ಮೃತಪಟ್ಟಿದ್ದರು. ಪ್ರಾಕೃತಿಕ ವಿಕೋಪ ನಿಧಿಯಡಿ ಪರಿಹಾರ ನೀಡುವಂತೆ ಶಾಸಕ ರಘುಪತಿ ಭಟ್ ಶಿಫಾರಸು ಮಾಡಿದ್ದರು.
ಇಂದು ಪ್ರಾಕೃತಿಕ ವಿಕೋಪ ನಿಧಿಯಡಿ ಮಂಜೂರಾದ 5 ಲಕ್ಷ ರೂ. ಮೊತ್ತದ ಚೆಕ್ ಅನ್ನು ಮೃತನ ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು.