ಉಡುಪಿ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಳೆದವಾರ ಮಂಗಳೂರು ಬಾಂಬ್ ಪತ್ತೆ ಕುರಿತು ಮಾತನಾಡುವಾಗ ಮಿಣಿ ಮಿಣಿ ಪೌಡರ್ ಎಂದ ಪದ ಬಳಸಿದ್ದು, ಸದ್ಯ ಜಾಲತಾಣದಲ್ಲಿ ಆ ಡೈಲಾಗ್ ಟ್ರೆಂಡ್ ಸೃಷ್ಟಿಸಿದೆ. ಇದೀಗ ಮಿಣಿ ಮಿಣಿ ಪೌಡರ್ ಜನಪ್ರಿಯತೆ ಕರಾವಳಿಯ ಗಂಡು ಕಲೆ ಯಕ್ಷಗಾನದ ರಂಗಸ್ಥಳಕ್ಕೂ ಕಾಲಿಟ್ಟಿದೆ.
ತೆಂಕುತಿಟ್ಟಿನ ಬಯಲಾಟದ ಪ್ರದರ್ಶನ ಸಂದರ್ಭದಲ್ಲಿ ಹಾಸ್ಯಗಾರ ವೇಷಧಾರಿ ಮಿಣಿ ಮಿಣಿ ಪುಡಿ ಎನ್ನುವ ಮಾತು ಬಳಸಿಕೊಂಡು ಪ್ರೇಕ್ಷಕರನ್ನ ನಗೆಗಡಿಲಿನಲ್ಲಿ ತೇಲಿಸಿದ್ದಾರೆ. ಈ ವಿಡಿಯೋ ಕರಾವಳಿಯಲ್ಲಿ ವೈರಲ್ ಆಗುತ್ತಿದೆ. ಈ ಹಿಂದೆ ಇದೇ ರೀತಿ ಕುಮಾರ ಸ್ವಾಮಿಯವರ ನಿಖಿಲ್ ಎಲ್ಲಿದ್ದೀಯಪ್ಪ ಎನ್ನುವ ಮಾತು ಕೂಡ ಯಕ್ಷಗಾನದಲ್ಲಿ ಹಾಸ್ಯಕ್ಕೆ ಬಳಸಲಾಗಿತ್ತು.