ETV Bharat / state

ಕುಂದಾಪುರ ಮೂಲದ ದಂಪತಿಗೆ ಮ್ಯೂನಿಚ್​ನಲ್ಲಿ ಚೂರಿ ಇರಿತ

ಭಾರತೀಯ ಮೂಲದ ದಂಪತಿಗೆ ಜರ್ಮನಿಯ ಮ್ಯೂನಿಚ್ ನಗರದಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವ ಚೂರಿ ಇರಿದಿರುವ ಘಟನೆ ನಡೆದಿದೆ.

author img

By

Published : Mar 30, 2019, 8:23 PM IST

ಭಾರತೀಯ ಮೂಲದ ದಂಪತಿ

ಉಡುಪಿ: ಜರ್ಮನಿಯ ಮ್ಯೂನಿಚ್ ನಗರದಲ್ಲಿ ನಡೆದ ಚೂರಿ ಇರಿತದಲ್ಲಿ ಕುಂದಾಪುರ ಮೂಲದ ದಂಪತಿ ಸಿಲುಕಿ ಹಾಕಿಕೊಂಡಿದ್ದು, ಪತ್ನಿ ಪಾರಾಗಿ ಪತಿ ಮೃತಪಟ್ಟ ಘಟನೆ ನಡೆದಿದೆ.

  • Indian couple Prashant and Smita Basarur were stabbed by an immigrant near Munich. Unfortunately, Prashant has expired. Smita is stable. We are facilitating the travel of Prashant's brother to Germany. My heartfelt condolences to the bereaved family. /1

    — Chowkidar Sushma Swaraj (@SushmaSwaraj) March 30, 2019 " class="align-text-top noRightClick twitterSection" data=" ">

ಕುಂದಾಪುರದ ಬಸ್ರೂರು ಮೂಲದ ಪ್ರಶಾಂತ್ ಸಾವಿಗೀಡಾಗಿದ್ದು, ಪತ್ನಿ ಸ್ಮಿತಾ ಸಿದ್ಧಾಪುರ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಈ ಕುರಿತು ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಮೃತಪಟ್ಟ ಪ್ರಶಾಂತ್ ಬಸ್ರೂರು ಅವರ ತಮ್ಮನಿಗೆ ಜರ್ಮನಿ ತೆರಳಲು ವ್ಯವಸ್ಥೆ ಕಲ್ಪಿಸಿರುವುದಾಗಿ ತಿಳಿಸಿ, ಪ್ರಶಾಂತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಭಾರತೀಯ ಮೂಲದ ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಸುಮಾರು 15 ವರ್ಷಗಳಿಂದ ಮ್ಯೂನಿಚ್ ನಿವಾಸಿಗರಾಗಿದ್ದರು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವ ದಂಪತಿಗೆ ಚೂರಿ ಇರಿದಿದ್ದ ಎನ್ನಲಾಗಿದೆ.

sample description

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.