ಉಡುಪಿ: ನೋಡ ನೋಡುತ್ತಿದ್ದಂತೆ ದೈತ್ಯ ಅಲೆಗಳ ಹೊಡೆತಕ್ಕೆ ಸಿಕ್ಕಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ’ಮರವಂತೆ’ ಸಮುದ್ರ ಕಿನಾರೆಯಲ್ಲಿ ನಡೆದಿದೆ.
ಮೃತಪಟ್ಟವರನ್ನು ಮಾರಣಕಟ್ಟೆ ಸಮೀಪದ ಚಿತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಯ್ಕಂಬ್ಳಿಯ ನಿವಾಸಿ ಚೇತನ್ ಶೆಟ್ಟಿ (45) ಎಂದು ಗುರುತಿಸಲಾಗಿದೆ.
ವಿದೇಶದಲ್ಲಿ ಉದ್ಯೋಗದಲ್ಲಿದ್ದ ಚೇತನ್ ರಜೆಯಲ್ಲಿ ಊರಿಗೆ ಆಗಮಿಸಿದ್ದರು. ಸಮುದ್ರ ವಿಹಾರಕ್ಕಾಗಿ ಮರವಂತೆಗೆ ಆಗಮಿಸಿದ್ದ ಅವರು ಮಳೆಗಾಲದಲ್ಲಿ ಅಲೆಗಳ ಹೊಡೆತದ ಕುರಿತು ಅರಿವಿಲ್ಲದೇ ನೀರಿಗೆ ಇಳಿದಿದ್ದಾರೆ.
ಭಾರಿ ಅಲೆಗಳ ಹೊಡೆತಕ್ಕೆ ಚೇತನ್ ಸಮುದ್ರ ಪಾಲಾಗಿದ್ದಾರೆ. ಈ ದೃಶ್ಯ ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ಮೊಬೈಲ್ನಲ್ಲಿ ದಾಖಲಾಸಿದ್ದಾರೆ.
ಇನ್ನು ಸ್ಥಳೀಯ ಮೀನುಗಾರರು, ಅಗ್ನಿಶಾಮಕದಳದವರ ಸತತ ಕಾರ್ಯಾಚರಣೆ ಬಳಿಕ ಚೇತನ್ ಶವ ಪತ್ತೆಯಾಗಿದೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.