ETV Bharat / state

ಉಡುಪಿಯ ವಿವಿಧ ಇಲಾಖೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳಿಂದ ದಿಢೀರ್ ದಾಳಿ - Udupi District Collector

ಕುಂದಾಪುರ ಪುರಸಭೆ, ಎಸಿ ಕಚೇರಿ, ಎಪಿಎಂಸಿ ಮಾರುಕಟ್ಟೆಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಕೊರೊನಾ ತಡೆಗಟ್ಟುವಿಕೆಗೆ ಕೈಗೊಂಡ ಮುಂಜಾಗ್ರತಾ ಕ್ರಮಗಳ ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ಡಿವೈಎಸ್​​ಪಿ ಭಾಸ್ಕರ್ ಬಿ. ನೇತೃತ್ವದಲ್ಲಿ ದಾಳಿ ನಡೆದಿದ್ದು, ವಿವಿಧ ಇಲಾಖೆಯ ದಾಖಲೆ ಪರಿಶೀಲಿಸಿದ್ದಾರೆ.

Lokayukta Raided on several Government offices in Udupi today
ಉಡುಪಿಯ ವಿವಿಧ ಇಲಾಖೆಗಳ ಮೇಲೆ ಲೋಕಾಯುಕ್ತ ದಿಢೀರ್ ದಾಳಿ, ಪರಿಶೀಲನೆ
author img

By

Published : Jun 29, 2020, 5:44 PM IST

ಉಡುಪಿ: ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ವಹಿಸದ ಸರ್ಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ಡಿವೈಎಸ್​​ಪಿ ಭಾಸ್ಕರ್​​ ಬಿ. ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಉಡುಪಿಯ ವಿವಿಧ ಇಲಾಖೆಗಳ ಮೇಲೆ ಲೋಕಾಯುಕ್ತ ದಿಢೀರ್ ದಾಳಿ

ಕುಂದಾಪುರ ಪುರಸಭೆ, ಎಸಿ ಕಚೇರಿ, ಎಪಿಎಂಸಿ ಮಾರುಕಟ್ಟೆಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿದ್ದಾರೆ. ಕೊರೊನಾ ತಡೆಗಟ್ಟುವಿಕೆಗೆ ಕೈಗೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಮಾಸ್ಕ್ ಧರಿಸದ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಥರ್ಮಲ್​​ ಸ್ಕ್ಯಾನರ್ ಇಲ್ಲ, ಭೇಟಿ ಕೊಟ್ಟವರ ದಾಖಲೆಯೂ ನಿರ್ವಹಣೆ ಮಾಡಿಲ್ಲದ ಕುರಿತು ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಎಸಿ ಕಚೇರಿಯಲ್ಲಿ ಕರ್ತವ್ಯಲೋಪದ ಕುರಿತು ಗರಂ ಆದ ಲೋಕಾಯುಕ್ತರು, ಹಾಜರಾತಿ ಪುಸ್ತಕದಲ್ಲಿ ಸಹಿಯೇ ಹಾಕದಿರುವ ಕೆಲವು ಸಿಬ್ಬಂದಿಗೆ ಮೆಮೋ ನೀಡಿದ್ದಾರೆ. ಲೋಕಾಯುಕ್ತ ಡಿವೈಎಸ್​​​​ಪಿ ಭಾಸ್ಕರ್ ಹಾಗೂ ಇತರೆ ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.