ಉಡುಪಿ: ಬ್ರಹ್ಮಾವರ ತಾಲೂಕು ಬಾರ್ಕೂರು ಬಳಿಯಿರುವ ಐತಿಹಾಸಿಕ ಚೌಳಿ ಕೆರೆಗೆ ಕಾರೊಂದು ಉರುಳಿಬಿದ್ದ ಪರಿಣಾಮ ಸ್ಥಳೀಯ ಉದ್ಯಮಿಯೊಬ್ಬರು ಸಾವನ್ನಪ್ಪಿದ್ದಾರೆ.
![car accident](https://etvbharatimages.akamaized.net/etvbharat/prod-images/7716424_thumb.jpg)
ಪ್ಲೈವುಡ್ ಅಂಗಡಿ ಮಾಲೀಕ ಸಂತೋಷ ಶೆಟ್ಟಿ ಮೃತರು. ಬಾರ್ಕೂರಿನಿಂದ ಸೈಬರ್ ಕಟ್ಟೆ ಮಾರ್ಗದಲ್ಲಿ ಬರುವ ವೇಳೆ ಈ ಅವಘಡ ಸಂಭವಿಸಿದೆ. ತಿರುವಿನಲ್ಲಿ ಇರುವ ಕೆರೆಗೆ ತಡೆಗೋಡೆಗಳು ಇಲ್ಲದ ಕಾರಣದಿಂದ ಅವಘಡ ನಡೆದಿದೆ ಎನ್ನಲಾಗ್ತಿದೆ.
![car accident](https://etvbharatimages.akamaized.net/etvbharat/prod-images/7716424_thumbnai.jpg)
ಸ್ಥಳೀಯರ ನೆರವಿನಿಂದ ಕಾರಿನಲ್ಲಿದ್ದ ಸಂತೋಷ್ ಶೆಟ್ಟಿಯನ್ನು ರಕ್ಷಿಸುವ ಯತ್ನ ನಡೆದಿತ್ತಾದರೂ, ಅಷ್ಟರಲ್ಲಿ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.