ಉಡುಪಿ:ಮನುಷ್ಯ ತಂತ್ರಜ್ಞಾನದತ್ತ ಹೊರಳಿದಷ್ಟು ಪರಿಸರ ಮಾಲಿನ್ಯ, ಗ್ಲೋಬಲ್ ವಾರ್ಮಿಂಗ್ ಹೆಚ್ಚಾಗುತ್ತಾ ಹೋಗ್ತಿದೆ. ದಿನಕಳೆದಂತೆ ಉಸಿರಾಡೋ ಗಾಳಿ ವಿಷವಾಗುತ್ತಿದೆ. ಮನುಷ್ಯ ಇದೆಲ್ಲವುದರತ್ತ ಕೊಂಚ ಚಿತ್ತ ಹರಿಸಿ ಕಾರ್ಯಪ್ರವೃತ್ತನಾದರೆ ಇದೆಲ್ಲವನ್ನೂ ಒಂದಿಷ್ಟು ತಡೆಯಬಹುದು.. ಹಾಗಾಗಿ ದ್ವಿಚಕ್ರ ವಾಹನದಿಂದ ಆಗುವ ಮಾಲಿನ್ಯ ಕಡಿಮೆ ಮಾಡೋಕೆ ಇಲ್ಲೊಬ್ಬರು ಕಿಟ್ವೊಂದನ್ನು ಅನ್ವೇಷಣೆ ಮಾಡಿದ್ದಾರೆ.
ಉಡುಪಿ ಕೃಷ್ಣ ಆಚಾರ್ಯ ಎಂಬುವವರು ಕ್ರಿಷ್ ಕಿಟ್ ಅನ್ನು ಅನ್ವೇಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕಾರ್ಪೆಂಟಿಂಗ್ ಉದ್ಯಮದಲ್ಲಿ ತೊಡಗಿಸಿಕೊಂಡಿರೋ ಇವರು ತಮ್ಮ ಬೈಕಿನಲ್ಲಿಯೇ ಕಿಟ್ ಅಳವಡಿಸಿ ಪ್ರಯೋಗ ಮಾಡ್ತಿದ್ದಾರೆ. ಬೈಕ್ ಹಿಂಭಾಗದಲ್ಲಿ ಚಿಕ್ಕ ಸಿಲಿಂಡರ್ ಇರಿಸಿಕೊಂಡು ಅದಕ್ಕೆ ವಿವಿಧ ತಂತ್ರಜ್ಞಾನ ಬಳಸಿಕೊಂಡು ಈ ಕಿಟ್ ಅನ್ನು ತಯಾರು ಮಾಡಿದ್ದಾರೆ. ಸೀಟ್ ಹಿಂಭಾಗದಲ್ಲಿ ನೀರು ತುಂಬಿದ ಸಿಲಿಂಡರ್ ಇರಿಸಿ ಚಿಕ್ಕ ಪೈಪ್ಲೈನ್ ಮೂಲಕ ಟಯರ್ಗೆ ಇದನ್ನು ಕನೆಕ್ಟ್ ಮಾಡಿದ್ದಾರೆ. ಬೈಕ್ ಮೂವ್ ಮಾಡಿದಾಗ ಈ ಕಿಟ್ ಕೆಲಸ ಆರಂಭಿಸುತ್ತೆ.
ಟಯರ್ ಮೂಲಕ ಹನಿ ಹನಿಯಾಗಿ ರಸ್ತೆಗೆ ಬೀಳುವ ಈ ನೀರು ಧೂಳನ್ನು ತಡೆದು ವಾತಾವರಣದ ಉಷ್ಣತೆ ಕಡಿಮೆ ಮಾಡುತ್ತದೆ ಅಂತಾರೆ ಕೃಷ್ಣ. ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರಿನಲ್ಲೇ ಕಿಟ್ ರೆಡಿ ಮಾಡಿದ ಅವರು ಬೆಂಗಳೂರಿನಲ್ಲಿ ಸುತ್ತುವಾಗ ಈ ಕಿಟ್ ಅನ್ನು ಕಂಡು ಬಹಳಷ್ಟು ಮಂದಿ ಆಶ್ಚರ್ಯಪಟ್ಟಿದ್ದಾರೆ ಅಂತಾ ಆಚಾರ್ಯ ಹೇಳ್ತಾರೆ.
ಕ್ರಿಷ್ ಕಿಟ್ ಅನ್ನು ದ್ವಿಚಕ್ರ ವಾಹನ ಸವಾರರು ಬಳಸಿದ್ರೆ ಒಂದಿಷ್ಟು ವಾಯು ಮಾಲಿನ್ಯವನ್ನು ಕಡಿಮೆ ಮಾಡಬಹುದು ಅನ್ನೋದು ಇವರ ಅಭಿಪ್ರಾಯ. ಸರ್ಕಾರ ಇದನ್ನು ಗುರುತಿಸಿ ಒಂದಿಷ್ಟು ತಂತ್ರಜ್ಞಾನದ ಮೂಲಕ ಇದನ್ನ ಡೆವಲಪ್ ಮಾಡಿದ್ರೆ ವಾಯುಮಾಲಿನ್ಯ ತಡೆಗೆ ಒಂದಿಷ್ಟು ಕೊಡುಗೆ ನೀಡಬಹುದು.