ಉಡುಪಿ: ದಕ್ಷಿಣ ಭಾರತದ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ದೊಡ್ಡಮಟ್ಟದಲ್ಲಿ ದೋಖಾವೊಂದು ನಡೆದಿದ್ದು, ಅದೀಗ ಹೊರಬಿದ್ದಿದೆ.
ಹೌದು, ಮುಜರಾಯಿ ಇಲಾಖೆಗೆ ಅತಿ ಹೆಚ್ಚು ವರಮಾನ ಇರುವ ದೇವಸ್ಥಾನಗಳಲ್ಲಿ ಮೂಕಾಂಬಿಕೆಯ ಸನ್ನಿಧಿಯೂ ಒಂದು. ಮೂಕಾಂಬಿಕೆ ದೇವಸ್ಥಾನದ ಸೇವೆಗಳನ್ನು, ಹೋಮ ಹವನಾದಿಗಳನ್ನು ಆನ್ಲೈನ್ ಮೂಲಕ ಭಕ್ತರು ಬುಕ್ ಮಾಡುವ ವ್ಯವಸ್ಥೆ ಈ ದೇವಾಲಯದಲ್ಲಿ ಇದೆ. ಆದರೆ ಇದೀಗ ದೇವಾಲಯದ ಅಧಿಕೃತ ವೆಬ್ಸೈಟ್ಅನ್ನೇ ನಕಲಿ ಮಾಡಿ ಭಕ್ತರಿಗೆ ದೋಖಾ ಮಾಡಿರುವ ದಂಧೆ ಬಯಲಾಗಿದೆ.
ಆನ್ಲೈನ್ ಮೂಲಕ ಹಣ ಸಂದಾಯ ಮಾಡಿದ ಭಕ್ತರಿಗೆ ಪೂಜೆ ಮಾಡಿಯೋ, ಮಾಡದೆಯೋ ಪ್ರಸಾದ ತಲುಪುತ್ತಿತ್ತು. ಆದ್ರೆ ಹಣ ಮಾತ್ರ ದೇವಸ್ಥಾನಕ್ಕೆ ಸಂದಾಯ ಆಗುತ್ತಿರಲಿಲ್ಲ. ದೇವಸ್ಥಾನದ ಇಓ ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ಕೈಗೆತ್ತಿಕೊಂಡು ತನಿಖೆ ಶುರು ಮಾಡಿದ್ದಾರೆ.
ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಅರ್ಚಕರು ಇದರಲ್ಲಿ ನೇರ ಶಾಮೀಲಾಗಿರುವ ಬಗ್ಗೆ ಸಂಶಯವಿದೆ.