ಉಡುಪಿ: ಕೊಡೇರಿ ದೋಣಿ ದುರಂತಕ್ಕೆ ಸಂಬಂಧಪಟ್ಟಂತೆ ಮತ್ತೆ ಮೂವರ ಮೃತದೇಹಗಳು ಪತ್ತೆಯಾಗಿವೆ. ಸಮುದ್ರದ ಪಾಲಾಗಿದ್ದ ಒಟ್ಟು ನಾಲ್ಕು ಜನರ ಮೃತದೇಹಗಳು ಪತ್ತೆಯಾದಂತಾಗಿದೆ.
ಕೊಡೇರಿ ದೋಣಿ ದುರಂತ ಪ್ರಕರಣ: ಓರ್ವ ಮೀನುಗಾರನ ಮೃತದೇಹ ಪತ್ತೆ
ಇಂದು ಬೆಳಗ್ಗೆ ನಾಗ ಕಾರ್ವಿ ಎಂಬುವರ ಮೃತದೇಹ ಪತ್ತೆಯಾಗಿತ್ತು. ಸಂಜೆಯ ಸುಮಾರಿಗೆ ಶೇಖರ ಮತ್ತು ಲಕ್ಷ್ಮಣ ಎಂಬುವರ ಮೃತದೇಹಗಳು ಪತ್ತೆಯಾಗಿದ್ದವು. ಇದೀಗ ಮಂಜುನಾಥ್ ಅವರ ಮೃತದೇಹ ಗಂಗೆ ಬೈಲು ಪರಿಸರದಲ್ಲಿ ಪತ್ತೆಯಾಗಿದೆ.
ಉಡುಪಿ ಸಮುದ್ರದಲ್ಲಿ ನಾಡದೋಣಿ ದುರಂತ: ನಾಲ್ವರು ಮೀನುಗಾರರು ಕಣ್ಮರೆ
ಸತತ ಮಳೆಯ ನಡುವೆಯೂ ಮೀನುಗಾರರು ಮತ್ತು ಕರಾವಳಿ ಕಾವಲು ಪಡೆಯವರ ಕಾರ್ಯಾಚರಣೆಯಿಂದಾಗಿ ಸಮುದ್ರ ಪಾಲಾದ ಮೀನುಗಾರರ ಮೃತದೇಹಗಳು ಪತ್ತೆಯಾಗಿವೆ.