ETV Bharat / state

ಮನೆ ಅಂದದ ಜೊತೆ ಆರೋಗ್ಯ ವೃದ್ಧಿ.. ಕರಾವಳಿಗೆ ಬಂದ ಜಪಾನಿ ಕೊಕೆಡಾಮ ಕಲೆ.. - ಡಾಮ ಅಂದರೆ ಉಂಡೆ.

ಇದನ್ನು ಮನೆಯ ಎದುರು ಅಥವ ಒಳಗಡೆ ನೇತು ಹಾಕಬಹುದು. ಅಲ್ಲದೇ ಪಿಂಗಾಣಿ ಬುಟ್ಟಿಯಲ್ಲಿ ಇಟ್ಟರೆ ಚಂದವಾಗಿ ಕಾಣುತ್ತೆ. ಕೊಕೆಡಾಮ‌ ಮನೆಯ ಅಂದ ಹೆಚ್ಚಿಸುವುದರ ಜೊತೆಗೆ ಯಥೇಚ್ಛವಾಗಿ ಆಮ್ಲಜನಕ ಒದಗಿಸಿ ಆರೋಗ್ಯ ವೃದ್ಧಿಸುತ್ತದೆ..

japanese-kokedama-art-introduced-udupi-woman
ಕರಾವಳಿಗೆ ಬಂದ ಜಪಾನಿ ಕೊಕೆಡಾಮ ಕಲೆ
author img

By

Published : Nov 24, 2020, 5:40 PM IST

ಉಡುಪಿ : ಮನೆಯ ಅಂದ-ಚಂದ ಹೆಚ್ಚಿಸುವಲ್ಲಿ ಹೂ ಗಿಡಗಳ ಪಾತ್ರ ತುಂಬಾನೇ ಮುಖ್ಯ. ಆದರೆ, ನಗರವಾಸಿಗಳಿಗೆ ಸ್ಥಳಾವಕಾಶದ ಕೊರತೆಯಿಂದ ಹೆಚ್ಚು ಹೂ ಗಿಡಗಳನ್ನು ಬೆಳೆಯಲು ಸಾಧ್ಯವಾಗಿಲ್ಲ.

ಹೀಗಾಗಿ, ಮನೆಯ ಒಳಾಂಗಣ-ಹೊರಾಂಗಣದಲ್ಲಿ ಬೆಳೆಯಬಹುದಾದ ಜಪಾನಿ ಕೊಕೆಡಾಮ ಕಲೆಯನ್ನು ಕರಾವಳಿ ಮಹಿಳೆಯೊಬ್ಬರು ಪರಿಚಯಿಸಿದ್ದಾರೆ.

ಕರಾವಳಿಗೆ ಬಂದ ಜಪಾನಿ ಕೊಕೆಡಾಮ ಕಲೆ

ನಗರವಾಸಿಗಳಿಗೆ ಹೂವಿನ‌ತೋಟ ಮಾಡೋದು ಬಹಳ ಕಷ್ಟ. ಹೀಗಾಗಿ, ಹೂಕುಂಡಗಳನ್ನು ಇಡ್ತಾರೆ. ಇದನ್ನು ಹೆಚ್ಚು ದಿನ ಇಡೋಕೆ ಸಾಧ್ಯವಾಗಲ್ಲ.

ಇಂತವರಿಗೆ ಅಂತಾನೆ ಜಪಾನಿ ಕೊಕೆಡಾಮ ಕಲೆಯನ್ನು ಕರಾವಳಿಯಲ್ಲಿ ಪರಿಚಯಿಸಿದ್ದಾರೆ ಪೇತ್ರಿಯ ಪ್ರಸನ್ನ ಅವರು. ಕೊಕೆಡಾಮ ಕಲೆಯನ್ನು ಪ್ರಸನ್ನ ಅವರು ಕಲಿತಿದ್ದು, ಯೂಟ್ಯೂಬ್ ನೋಡಿ.

ಕೊಕೆ ಅಂದರೆ ಜಪಾನಿ ಭಾಷೆಯಲ್ಲಿ ಪಾಚಿ, ಡಾಮ ಅಂದರೆ ಉಂಡೆ. ಒಟ್ಟಾಗಿ ಕೊಕೆಡಾಮ ಆಗೋ ಇದನ್ನು ತಯಾರು ಮಾಡೋದು ಹೇಗೆಂದರೆ, ಸ್ವಲ್ಪ ಕಾಂಪೋಸ್ಟ್ ಹುಡಿ ತೆಗೆದುಕೊಂಡು, ಮಧ್ಯದಲ್ಲಿ ಗಿಡ ನೆಟ್ಟು ನಂತರ ಜೇಡಿ ಮಣ್ಣಿನಿಂದ ಅದನ್ನು ಉಂಡೆ ಮಾಡಬೇಕು.

ಅದರ ಸುತ್ತ ಹತ್ತಿ ಬಟ್ಟೆಯಿಂದ ಕಟ್ಟಿ ನಂತ್ರ ಸುತ್ತಲೂ ತೆಂಗಿನ ನಾರು, ಹುಡಿ ಮಾಡಿದ ಪಾಚಿಯನ್ನು ಇಟ್ಟು, ನೈಲಾನ್ ಹಗ್ಗದಿಂದ ಸುತ್ತಿದರೆ ಸುಲಭವಾಗಿ ಕೊಕೆಡಾಮ ರೆಡಿ.

ಇದನ್ನು ಮನೆಯ ಎದುರು ಅಥವ ಒಳಗಡೆ ನೇತು ಹಾಕಬಹುದು. ಅಲ್ಲದೇ ಪಿಂಗಾಣಿ ಬುಟ್ಟಿಯಲ್ಲಿ ಇಟ್ಟರೆ ಚಂದವಾಗಿ ಕಾಣುತ್ತೆ. ಕೊಕೆಡಾಮ‌ ಮನೆಯ ಅಂದ ಹೆಚ್ಚಿಸುವುದರ ಜೊತೆಗೆ ಯಥೇಚ್ಛವಾಗಿ ಆಮ್ಲಜನಕ ಒದಗಿಸಿ ಆರೋಗ್ಯ ವೃದ್ಧಿಸುತ್ತದೆ.

ಕೊಕೆಡಾಮದಲ್ಲಿ ರಿಬ್ಬನ್, ಗ್ರಾಸ್, ಪೈಕಾಸ್, ಸಣ್ಣಪುಟ್ಟ ಗಿಡಗಳನ್ನು ಬೆಳೆಯಬಹುದು. ನೀರಿನ ತೇವಾಂಶದಿಂದಲೇ ಇದು ಬೆಳೆಯುವ ಕಾರಣ ಮೂರು ದಿನಕ್ಕೊಮ್ಮೆ ನೀರು ಅದ್ದಿ ತೆಗೆದರೆ ಅದು ಜಲಾಮೃತ.

ಇದನ್ನು ಓದಿ: 43 ಮೊಬೈಲ್ ಆ್ಯಪ್‌ಗಳನ್ನು ನಿಷೇಧಿಸಿದ ಸರ್ಕಾರ: ಇದರಲ್ಲಿ ನೀವು ಬಳಸೋ ತಂತ್ರಾಂಶ ಇದೆಯಾ ಚಕ್​ ಮಾಡಿ!!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.