ETV Bharat / state

ಮಾದರಿಯಾದ ನಕ್ಸಲ್​ ಪೀಡಿತ ಗ್ರಾಮ... ಅಮಾಸೆಬೈಲು ಈಗ ಸಂಪೂರ್ಣ ಸೋಲಾರ್​ ಹಳ್ಳಿ - Kn-udp_130619-naxal solar village-harsha-spl-story

ಈ ಕನಸು ನನಸು ಮಾಡಿದ್ದು, ಅಮಾಸೆಬೈಲು ಚಾರಿಟಬಲ್ ಟ್ರಸ್ಟ್. ರಾಜಕೀಯದಲ್ಲಿ ವಿವಿಧ ಹುದ್ದೆ ಅನುಭವಿಸಿ, ಸದ್ಯ ರಾಜಕಾರಣದಿಂದ ನಿವೃತ್ತರಾಗಿರುವ ಹಿರಿಯ ನಾಯಕ ಎ.ಜಿ.ಕೊಡ್ಗಿ ಈ ಟ್ರಸ್ಟ್ ನ ಮುಖ್ಯಸ್ಥರು. ಇವರೊಬ್ಬ ಅಪರೂಪದ ರಾಜಕಾರಣಿ. ಕಾಡುಗುಡ್ಡ ಪರಿಸರದ ಮಡಿಲಲ್ಲಿರುವ ಈ ಗ್ರಾಮದ ಎಲ್ಲ ಮನೆಗಳು ಈಗ ಸೋಲಾರ್ ಅಳವಡಿಸಿಕೊಂಡಿವೆ.

ಅಮಾಸೆಬೈಲು ಈಗ ಸಂಪೂರ್ಣ ಸೋಲಾರ್​ ಹಳ್ಳಿ
author img

By

Published : Jun 14, 2019, 9:36 AM IST

Updated : Jun 14, 2019, 12:58 PM IST

ಉಡುಪಿ: ಸಮಸ್ಯೆಗಳಿಗೆ ಸಶಸ್ತ್ರ ಹೋರಾಟವೇ ಪರಿಹಾರ ಎಂದು ನಕ್ಸಲರು ಈ ಗ್ರಾಮದಲ್ಲಿ ತಮ್ಮ ಚಟುವಟಿಕೆ ಆರಂಭಿಸಿದ್ದರು.ಆದರೆ, ಸ್ವಾವಲಂಬನೆಯೇ ಪರಿಹಾರ ಎಂದು ಅಲ್ಲಿನ ಗ್ರಾಮಸ್ಥರು ತೋರಿಸಿಕೊಟ್ಟಿದ್ದಾರೆ.

ಉಡುಪಿ ಜಿಲ್ಲೆಯ ಅಮಾಸೆಬೈಲು ಎಂಬ ನಕ್ಸಲ್ ಪೀಡಿತ ಗ್ರಾಮ ಈಗ ಇತರ ಗ್ರಾಮಗಳಿಗೆ ಮಾದರಿಯಾಗಿದೆ. ಅಮಾಸೆಬೈಲು ಚಾರಿಟಬಲ್ ಟ್ರಸ್ಟ್ ಕಂಡ ಕನಸು ನನಸಾಗಿದ್ದು, ಈ ಗ್ರಾಮ ಈಗ ಸಂಪೂರ್ಣ ಸೋಲಾರ್ ಗ್ರಾಮವಾಗಿದೆ.

ಹಳ್ಳಿಗರು ಮನಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲರು ಅನ್ನೋದಕ್ಕೆ ಇದು ಸಾಕ್ಷಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾಸೆಬೈಲು ಒಂದು ನಕ್ಸಲ್ ಪೀಡಿತ ಗ್ರಾಮವಾಗಿತ್ತು. ಹಾಗಂತ ಅಲ್ಲಿನ ಜನರು ಈಗ ನಕ್ಸಲರು ಎಂದು ಕರೆಸಿಕೊಳ್ಳೋದಕ್ಕೆ ಬಯಸೋದಿಲ್ಲ. ಪ್ರಕೃತಿಯನ್ನು ಅವಲಂಬಿಸಿ ಅಭಿವೃದ್ಧಿಯ ಕನಸು ಕಂಡ ಈ ಹಳ್ಳಿ ಈಗ ಸಂಪೂರ್ಣ ಸೋಲಾರ್ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಮಾಸೆಬೈಲು ಈಗ ಸಂಪೂರ್ಣ ಸೋಲಾರ್​ ಹಳ್ಳಿ

ಈ ಕನಸು ನನಸು ಮಾಡಿದ್ದು, ಅಮಾಸೆಬೈಲು ಚಾರಿಟಬಲ್ ಟ್ರಸ್ಟ್. ರಾಜಕೀಯದಲ್ಲಿ ವಿವಿಧ ಹುದ್ದೆ ಅನುಭವಿಸಿ, ಸದ್ಯ ರಾಜಕಾರಣದಿಂದ ನಿವೃತ್ತರಾಗಿರುವ ಹಿರಿಯ ನಾಯಕ ಎ.ಜಿ.ಕೊಡ್ಗಿ ಈ ಟ್ರಸ್ಟ್ ನ ಮುಖ್ಯಸ್ಥರು. ಇವರೊಬ್ಬ ಅಪರೂಪದ ರಾಜಕಾರಣಿ. ಕಾಡುಗುಡ್ಡ ಪರಿಸರದ ಮಡಿಲಲ್ಲಿರುವ ಈ ಗ್ರಾಮದ ಎಲ್ಲ ಮನೆಗಳು ಈಗ ಸೋಲಾರ್ ಅಳವಡಿಸಿಕೊಂಡಿವೆ. ಮೂರು ಹಂತಗಳಲ್ಲಿ ಸುಮಾರು ಒಂದೂವರೆ ಸಾವಿರ ಮನೆಗಳಿಗೆ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಈ ಕ್ರಾಂತಿಕಾರಿ ಸಾಧನೆಯಿಂದ 1800 ಕುಟುಂಬಗಳಿಗೆ ಸೋಲಾರ್ ದೀಪ ಮತ್ತು 27 ಸೋಲಾರ್ ದಾರಿದೀಪಗಳನ್ನು ಅಳವಡಿಸಲಾಗಿದೆ.

ಗ್ರಾಮೀಣ ಕರ್ನಾಟಕದಲ್ಲಿ ವಿದ್ಯುತ್ ನದ್ದೇ ಸಮಸ್ಯೆ. ಈ ಕಣ್ಣಾ ಮುಚ್ಚಾಲೆಯಿಂದ ರೋಸಿ ಹೋಗಿ ಎಲ್ಲ ಗ್ರಾಮಸ್ಥರು ಈ ಯೋಜನೆಗೆ ಕೈ ಜೋಡಿಸಿದ್ದಾರೆ. ಮಾಗ್ಸೆಸ್ಸೆ ಪ್ರಶಸ್ತಿ ಪಡೆದ ಹರೀಶ್ ಹಂದೆ ಅವರ ನೇತೃತ್ವದ ಸೆಲ್ಕೋ ಸಂಸ್ಥೆ ಸಾಮಾನ್ಯ ದರದಲ್ಲಿ ಸೋಲಾರ್ ಯಂತ್ರಗಳನ್ನು ವ್ಯವಸ್ಥೆ ಮಾಡಿದೆ. ಪ್ರತಿಯೊಬ್ಬ ಗ್ರಾಮಸ್ಥ ಒಂದು ನಿಗದಿತ ಮೊತ್ತವನ್ನು ನೀಡಿದರೆ ಉಳಿದ ಶೇ. 75 ರಷ್ಟು ಹಣವನ್ನು ಜಿಲ್ಲಾಡಳಿತ ಭರಿಸುತ್ತೆ. ಇದಕ್ಕೆ ಎಂ.ಎನ್. ಆರ್. ಇ ಮತ್ತು ಕ್ರೆಡಲ್ ಮುಂತಾದ ಸಂಸ್ಥೆಗಳು ಕೈ ಜೋಡಿಸಿವೆ.

Intro:Filename:Udp_naxal solar village_pkg

Anchor-ಸಮಸ್ಯೆಗಳಿಗೆ ಸಶಸ್ತ್ರ ಹೋರಾಟವೇ ಪರಿಹಾರ ಎಂದು ನಕ್ಸಲರು ಆ ಗ್ರಾಮದಲ್ಲಿ ಚಟುವಟಿಕೆ ಆರಂಭಿಸಿದ್ದರು. ಆದರೆ ಸ್ವಾವಲಂಭನೆಯೇ ಪರಿಹಾರ ಎಂದು ಅಲ್ಲಿನ ಗ್ರಾಮಸ್ಥರು ತೋರಿಸಿಕೊಟ್ಟಿದ್ದಾರೆ. ಉಡುಪಿ ಜಿಲ್ಲೆಯ ಅಮಾಸೆಬೈಲು ಎಂಬ ನಕ್ಸಲ್ ಪೀಡಿತ ಗ್ರಾಮ ವಿದ್ಯುತ್ ಸ್ವಾವಲಂಭಿಯಾಗಿ ರೂಪುಗೊಂಡಿದೆ.ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಕಂಡ ಕನಸು ನನಸಾಗಿದೆ. ಇದು ವಿದ್ಯುತ್ ಉಳಿತಾಯದ ಕ್ರಾಂತಿಕಾರಿ ಯೋಜನೆ. ಅಮಾಸೆಬೈಲು ಗ್ರಾಮ ಈಗ ಸಂಪೂರ್ಣ ಸೋಲಾರ್ ಗ್ರಾಮ

V1-ಹಳ್ಳಿಗರು ಮನಸು ಮಾಡಿದರೆ ಏನನ್ನೂ ಸಾಧಿಸಬಲ್ಲರು ಅನ್ನೋದಕ್ಕೆ ಇಲ್ಲಿದೆ ಸಾಕ್ಷಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾಸೆಬೈಲು ಒಂದು ನಕ್ಸಲ್ ಪೀಡಿತ ಗ್ರಾಮ.ಆದರೆ ಹಾಗಂತ ಅಲ್ಲಿನ ಜನರು ಕರೆಸಿಕೊಳ್ಳೋದಕ್ಕೂ ಬಯಸೋದಿಲ್ಲ. ಪ್ರಕೃತಿಯನ್ನು ಅವಲಂಭಿಸಿ ಅಭಿವೃದ್ಧಿಯ ಕನಸು ಕಂಡ ಈ ಹಳ್ಳಿ ಈಗ ಸಂಪೂರ್ಣ ಸೋಲಾರ್ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕನಸು ನನಸು ಮಾಡಿದ್ದು ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್. ರಾಜಕೀಯದಲ್ಲಿ ವಿವಿಧ ಹುದ್ದೆ ಅನುಭವಿಸಿ, ಸದ್ಯ ರಾಜಕಾರಣದಿಂದ ನಿವೃತ್ತರಾಗಿರುವ ಹಿರಿಯ ನಾಯಕ ಎ.ಜಿ.ಕೊಡ್ಗಿ ಈ ಟ್ರಸ್ಟ್ ನ ಮುಖ್ಯಸ್ಥರು.ಇವರೊಬ್ಬ ಅಪರೂಪದ ರಾಜಕಾರಣಿ.ಕಾಡುಗುಡ್ಡ ಪರಿಸರದ ಮಡಿಲಲ್ಲಿರುವ ಈ ಗ್ರಾಮದ ಎಲ್ಲಾ ಮನೆಗಳು ಈಗ ಸೋಲಾರ್ ಅಳವಡಿಸಿಕೊಂಡಿವೆ. ಮೂರು ಹಂತಗಳಲ್ಲಿ ಸುಮಾರು ಒಂದುವರೆ ಸಾವಿರ ಮನೆಗಳಿಗೆ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಈ ಕ್ರಾಂತಿಕಾರಿ ಸಾಧನೆಯಿಂದ 1800 ಕುಟುಂಬಗಳಿಗೆ ಸೋಲಾರ್ ದೀಪ ಮತ್ತು 27 ಸೋಲಾರ್ ದಾರಿದೀಪಗಳನ್ನು ಅಳವಡಿಸಲಾಗಿದೆ

Byte-ಎ.ಜಿ.ಕೊಡ್ಗಿ, ಟ್ರಸ್ಟ್ ಮುಖ್ಯಸ್ಥ

V2_ಗ್ರಾಮೀಣ ಕರ್ನಾಟಕದಲ್ಲಿ ವಿದ್ಯುತ್ ನದ್ದೇ ಸಮಸ್ಯೆ, ಈ ಕಣ್ಣಾ ಮುಚ್ಚಾಲೆಯಿಂದ ರೋಸಿ ಹೋಗಿ ಎಲ್ಲಾ ಗ್ರಾಮಸ್ಥರು ಈ ಯೋಜನೆಗೆ ಕೈ ಜೋಡಿಸಿದ್ದಾರೆ.ಮಾಗ್ಸೆಸೆ ಪ್ರಶಸ್ತಿ ಪಡೆದ ಹರೀಶ್ ಹಂದೆ ಅವರ ನೇತೃತ್ವದ ಸೆಲ್ಕೋ ಸಂಸ್ಥೆ ಸಾಮಾನ್ಯ ದರದಲ್ಲಿ ಸೋಲಾರ್ ಯಂತ್ರಗಳನ್ನು ವ್ಯವಸ್ಥೆ ಮಾಡಿದೆ. ಪ್ರತಿಯೊಬ್ಬ ಗ್ರಾಮಸ್ಥ ಒಂದು ನಿಗದಿತ ಮೊತ್ತವನ್ನು ನೀಡಿದರೆ ಉಳಿದ ಶೇ. 75 ರಷ್ಟು ಹಣವನ್ನು ಜಿಲ್ಲಾಡಳಿತ ಭರಿಸುತ್ತೆ. ಎಂ.ಎನ್. ಆರ್. ಇ ಮತ್ತು ಕ್ರೆಡಲ್ ಮುಂತಾದ ಸಂಸ್ಥೆಗಳು ಕೈ ಜೋಡಿಸಿವೆ. ಕೆಲವು ಮನೆಗಳಿಗೆ ಎರಡು ದೀಪ, ಇನ್ನುಳಿದವಕ್ಕೆ ನಾಲ್ಕು ದೀಪ ವ್ಯವಸ್ಥೆ ಮಾಡಲಾಗಿದೆ. ಸಂಪೂರ್ಣ ಗ್ರಾಮ ಸೋಲಾರ್ ಅಳವಡಿಸಿಕೊಂಡ ಬೇರೆ ಉದಾಹರಣೆ ನಮ್ಮ ರಾಜ್ಯದಲ್ಲಿ ಕಾಣಸಿಗಲ್ಲ ಅನ್ನೋದು ಈ ಯೋಜನೆಯ ಹೆಗ್ಗಳಿಕೆ.

V3_ಗ್ರಾಮೀಣ ಸಮಸ್ಯೆಗೆ ಸಶಸ್ತ್ರ ಹೋರಾಟ ಉತ್ತರವಲ್ಲ, ಉತ್ತರ ಪ್ರಕೃತಿಯಲ್ಲೇ ಇದೆ ಅನ್ನೋದನ್ನು ಇಲ್ಲಿನ ಗ್ರಾಮಸ್ಥರು ತೋರಿಸಿಕೊಟ್ಟಿದ್ದಾರೆ. ಈ ಸೋಲಾರ್ ಗ್ರಾಮಕ್ಕೊಂದು ಸೆಲ್ಯೂಟ್Body:SolarConclusion:Solar
Last Updated : Jun 14, 2019, 12:58 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.