ಉಡುಪಿ: ಜಿಲ್ಲೆಯಲ್ಲಿ ಗಣೇಶ ಚೌತಿ ಸಂಭ್ರಮ ಜೋರಾಗಿದೆ. ಗೌರಿ-ಗಣೇಶ ಹಬ್ಬದ ಪ್ರಯುಕ್ತ ಹಣ್ಣು–ಹಂಪಲು, ಹೂವು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.
ಮಳೆಯ ಅಬ್ಬರ, ಬೆಲೆ ಏರಿಕೆ ನಡುವೆಯೂ ಉಡುಪಿ ಕೃಷ್ಣ ಮಠದ ರಥ ಬೀದಿಗಳಲ್ಲಿ ವ್ಯಾಪಾರ–ವಹಿವಾಟು ಭರ್ಜರಿಯಾಗಿ ನಡೆಯಿತು. ಅಲ್ಲದೆ, ವಿಘ್ನ ವಿನಾಶಕನ ಆರಾಧನೆಗೆ ಜನತೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ವರ್ಷಕ್ಕೊಮ್ಮೆ ಹಬ್ಬ ಬರಲಿದ್ದು, ಆರಾಧನೆಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನೂ ಖರೀದಿಸಿ ಸಂಭ್ರಮಿಸಿದರು. ಅಲ್ಲದೆ, ಬೆಲೆ ಏರಿಕೆಯಾದರೂ ಹಬ್ಬವನ್ನು ಅಚ್ಚುಕಟ್ಟಾಗಿ ಆಚರಿಸಲಿದ್ದೇವೆ ಎಂದು ಗ್ರಾಹಕರು ತಿಳಿಸುತ್ತಾರೆ.