ಉಡುಪಿ:ಮಣ್ಣಿಗೂ ಗಣಪನಿಗೂ ಅವಿನಾಭಾವ ಸಂಬಂಧ. ಯಾಕೆಂದರೆ, ಗಣಪನನ್ನೇ ಹೆಚ್ಚಾಗಿ ಮಣ್ಣಿನಿಂದ ತಯಾರಿಸಲಾಗುತ್ತದೆ. ಅಲ್ಲದೆ, ಇದೀಗ ಮರಳಿನಿಂದ ಗಣಪತಿ ರೂಪ ರಚಿಸುವ ಟ್ರೆಂಡ್ ಶುರುವಾಗಿದ್ದು, ಮಲ್ಪೆ ಬೀಚ್ನಲ್ಲಿ ಕಲಾವಿದನ ಕೈಯಲ್ಲಿ ಅರಳಿದ ಮರಳು ಗಣಪನಿಗೆ ಪ್ರವಾಸಿಗರು ಮಾರು ಹೋಗಿದ್ದಾರೆ.
ಮಣ್ಣಿನಿಂದ ತಯಾರಿಸುವ ಗಣೇಶ ವಿಗ್ರಹ ಬಹಳ ಶ್ರೇಷ್ಠವಾದದ್ದು ಎಂಬ ನಂಬಿಕೆಯೂ ಇದೆ. ಅಲ್ಲದೆ, ಪರಿಸರ ಸ್ನೇಹಿ ಕೂಡ. ಮರಳಿನಲ್ಲಿ ಅಂದದ ರೂಪ ಪಡೆದು ಸಕಲರಿಂದ ಪೂಜೆ ಪಡೆವ ಲಂಬೋದರ ರೂಪಕ್ಕೆ ಕಲಾವಿದರ ಕೈಚಳಕ ಬಹು ಮುಖ್ಯವಾದರು.
ಬೀಚ್ನಲ್ಲಿ 'ಭಕ್ತಿ ಸಲ್ಲಿಸಿ ಆಡಂಬರ ನಿಲ್ಲಿಸಿ' ಶೀರ್ಷಿಕೆ ಯಡಿಯಲ್ಲಿ ರಚಿಸಿದ ಮರಳು ಶಿಲ್ಪ ಪ್ರವಾಸಿಗರನ್ನು ಆಕರ್ಷಿಸಿತು.
ಭಯ,ಭಕ್ತಿ ಆಚರಣೆಯನ್ನು ಬಿಟ್ಟು ಸಂಸ್ಕ್ರತಿಗೆ ಧಕ್ಕೆ ತರುವಂತಹ ಆಚರಣೆ ಬೇಡ ಅನ್ನೋ ನಿಲುವಿನೊಂದಿಗೆ ಮಣಿಪಾಲ ತ್ರಿವರ್ಣ ಕಲಾ ತಂಡದ ಹಿರಿಯ ವಿದ್ಯಾರ್ಥಿಗಳು ಮರಳು ಗಣಪನನ್ನು ರಚಿಸಿ ಗಮನ ಸೆಳೆದರು. ಮರಳಿನಿಂದ ಭಕ್ತಾದಿಗಳನ್ನು ಮೋಡಿ ಮಾಡುವ ಗಣಪತಿಯನ್ನೊಮ್ಮೆ ನೋಡಿ ಬರೋಣ ಬನ್ನಿ.