ETV Bharat / state

ಬೀಡಿನಗುಡ್ಡೆಯಲ್ಲಿ ಚಿಂತಕ ಜಿ. ರಾಜ್ ಶೇಖರ್ ಅಂತ್ಯಕ್ರಿಯೆ - ಬೀಡಿನಗುಡ್ಡೆಯಲ್ಲಿ ನಡೆದ ಚಿಂತಕ ಜಿ ರಾಜ್ ಶೇಖರ್ ಅಂತ್ಯಕ್ರಿಯೆ

ಕೋಮು ಸೌಹಾರ್ದ ವೇದಿಕೆ ಸೇರಿದಂತೆ ಹಲವಾರು ಪ್ರಗತಿಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ರಾಜಶೇಖರ್ ಅವರ ಅಂತ್ಯಕ್ರಿಯೆ ಬೀಡಿನಗುಡ್ಡೆಯಲ್ಲಿ ನಡೆಯಿತು.

Funeral of writer Raj Shekhar held in Beedinagudde
ಜಿ. ರಾಜ್ ಶೇಖರ್ ಅಂತ್ಯಕ್ರಿಯೆ
author img

By

Published : Jul 21, 2022, 4:17 PM IST

Updated : Jul 21, 2022, 4:39 PM IST

ಉಡುಪಿ: ಖ್ಯಾತ ಬರಹಗಾರ, ಜಾಗತಿಕ ಸಾಹಿತ್ಯ ಅಧ್ಯಯನಕಾರ, ಹಿರಿಯ ಎಡಪಂಥೀಯ ಚಿಂತಕ ಜಿ ರಾಜ್ ಶೇಖರ್ ಇಂದು ಬೆಳಗ್ಗೆ ನಿಧನರಾಗಿದ್ದರು. ಅವರ ಅಂತಿಮ ಕ್ರಿಯೆ ಬೀಡಿನಗುಡ್ಡೆಯಲ್ಲಿ ನಡೆಯಿತು. ಕೋಮು ಸೌಹಾರ್ದ ವೇದಿಕೆ ಸೇರಿದಂತೆ ಹಲವಾರು ಪ್ರಗತಿಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ರಾಜಶೇಖರ್ ಅವರು ಉತ್ತಮ ಸಾಹಿತ್ಯ ವಿಮರ್ಶಕರಾಗಿ ಪ್ರಖ್ಯಾತಿಗಳಿಸಿದ್ದರು.

ಬೀಡಿನಗುಡ್ಡೆಯಲ್ಲಿ ಚಿಂತಕ ಜಿ. ರಾಜ್ ಶೇಖರ್ ಅಂತ್ಯಕ್ರಿಯೆ

ಯಶವಂತ ಚಿತ್ತಾಲ, ಗೋಪಾಲಕೃಷ್ಣ ಅಡಿಗ ಮೊದಲಾದವರ ಸಮಕಾಲೀನರಾಗಿ ಅವರ ಖ್ಯಾತ ಕೃತಿಗಳಿಗೆ ಮುನ್ನುಡಿ ಬರೆದಿರುವ ರಾಜಶೇಖರ್ ಅವರು ಕನ್ನಡದ ಪ್ರಸಿದ್ಧ ಲೇಖಕರಾಗಿದ್ದರು. ಆದರೆ, 90ರ ನಂತರ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡ ಇವರು ಕರಾವಳಿಯ ಕೋಮುವಾದಿ ಶಕ್ತಿಗಳ ವಿರುದ್ಧ ಸತ್ಯಶೋಧನಾ ವರದಿಗಳನ್ನು ಮಂಡನೆ ಮಾಡಿದ್ದರು. ಕಾರ್ಮಿಕ ಸಂಘಟನೆಗಳ ಮೂಲಕ ಬಂಡವಾಳ ಶಾಹಿ ವ್ಯವಸ್ಥೆಯ ವಿರುದ್ಧ ಕರಾವಳಿಯಲ್ಲಿ ಹೋರಾಟ ಸಂಘಟಿಸಿ ಚಳವಳಿ ನಡೆಸಿದ್ದರು.

ಉಡುಪಿ ಶ್ರೀ ಕೃಷ್ಣ ಮಠವನ್ನು ಸರಕಾರಿಕರಣ ಗೊಳಿಸಬೇಕು ಎಂದು ಧ್ವನಿ ಎದ್ದಾಗ ಜಿ ರಾಜಶೇಖರ್ ಅವರು ಅದರ ವಿರುದ್ಧ ಮಾತನಾಡಿ ಗಮನ ಸೆಳೆದಿದ್ದರು. ಬಹುವಚನ ಭಾರತ ಸೇರಿದಂತೆ ಅನೇಕ ಕೃತಿಗಳನ್ನು ಬರೆದಿರುವ ಜಿ ರಾಜಶೇಖರ್ ಅವರ ಮನೆಗೆ ನೂರಾರು ಅಭಿಮಾನಿಗಳು ಆಗಮಿಸಿ ಲಾಲ್ ಸಲಾಂ ಮೂಲಕ ಅಂತಿಮ ನಮನ ಸಲ್ಲಿಸಿದರು. ಇವರು ಪತ್ನಿ ಇಬ್ಬರು ಮಕ್ಕಳು ಮತ್ತು ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.

ಇದನ್ನೂ ಓದಿ: ಬೈಂದೂರು: ಚಾಕೊಲೇಟ್​ ಗಂಟಲಲ್ಲಿ ಸಿಲುಕಿ ಶಾಲಾ ಬಾಲಕಿ ಸಾವು

Last Updated : Jul 21, 2022, 4:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.