ETV Bharat / state

ಫೈನಾನ್ಶಿಯರ್ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ: ಪಾಲುದಾರ ಅನೂಪ್ ಶೆಟ್ಟಿ ಅರೆಸ್ಟ್​​ - partner Anoop Shetty Arrest

ಕುಂದಾಪುರ ಕಾಳಾವಾರದಲ್ಲಿ ಜು.30 ರಂದು ನಡೆದಿದ್ದ ಫೈನಾನ್ಶಿಯರ್ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೋವಾದ ಕೊಲ್ವಾ ಬೀಚ್ ಬಳಿ ಆರೋಪಿಯನ್ನು ಬಂಧಿಸಲಾಗಿದೆ.

Anoop Shetty Arrest
ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ: ಪಾಲುದಾರ ಅನೂಪ್ ಶೆಟ್ಟಿ ಅರೆಸ್ಟ್​​
author img

By

Published : Aug 2, 2021, 4:13 PM IST

ಉಡುಪಿ: ಫೈನಾನ್ಶಿಯರ್ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲುದಾರ ಅನೂಪ್ ಶೆಟ್ಟಿಯನ್ನು ಬಂಧಿಸಲಾಗಿದೆ. ನಾನೇ ಕೊಲೆ ಮಾಡಿದ್ದು ಎಂದು ಅನೂಪ್ ಒಪ್ಪಿಕೊಂಡಿದ್ದಾನೆ ಎಂದು ಉಡುಪಿ ಎಸ್​​ಪಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.

ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ: ಪಾಲುದಾರ ಅನೂಪ್ ಶೆಟ್ಟಿ ಅರೆಸ್ಟ್​​

ಕುಂದಾಪುರದ ಕಾಳಾವಾರದಲ್ಲಿ ಜು.30 ರಂದು ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೋವಾದ ಕೊಲ್ವಾ ಬೀಚ್ ಬಳಿ ಆರೋಪಿಯನ್ನು ಬಂಧಿಸಲಾಗಿದೆ. ಘಟನೆ ನಡೆದ 24 ಗಂಟೆಯೊಳಗೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

ಹಣಕಾಸಿನ ವ್ಯವಹಾರದಲ್ಲಿನ ವೈಮನಸ್ಸು ಕೊಲೆಗೆ ಕಾರಣವಾಗಿದ್ದು, ಕೊಲೆಯಲ್ಲಿ ಇತರರ ಭಾಗಿಯಾಗಿರುವ ಶಂಕೆ ಹಿನ್ನೆಲೆ ತನಿಖೆ ಮುಂದುವರಿದಿದೆ. ದುಬೈ, ಸಿಂಗಪುರದಲ್ಲಿ ಕೆಲಸ ಮಾಡುತ್ತಿದ್ದ ಅನೂಪ್ ಶೆಟ್ಟಿ ಅಜೇಂದ್ರ ಜತೆ ಫೈನಾನ್ಸ್ ಪಾರ್ಟನರ್ ಆಗಿ ಕೆಲಸ ಮಾಡುತ್ತಿದ್ದ. ಜೊತೆಯಲ್ಲಿದ್ದುಕೊಂಡೇ ಈ ಕೃತ್ಯ ಎಸಗಿದ್ದಾನೆ ಎಂದು ಎಸ್​​ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.

ಸದ್ಯ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ‌ ವಿಧಿಸಲಾಗಿದೆ.

ಇದನ್ನೂ ಓದಿ: ಫೈನಾನ್ಶಿಯರ್ ಅಜೇಂದ್ರ ಶೆಟ್ಟಿ ಹತ್ಯೆ ಪ್ರಕರಣ: ವ್ಯವಹಾರ ಪಾಲುದಾರ ಅನುಪ್ ಶೆಟ್ಟಿ ಕೃತ್ಯ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.