ಉಡುಪಿ: ಮನೆ ಮೇಲೆ ವಿದ್ಯುತ್ ತಂತಿ ಕಡಿದು ಬಿದ್ದ ಪರಿಣಾಮ ಭಾಗಶಃ ಮನೆ ಸುಟ್ಟು ಕರಕಲಾಗಿ ಲಕ್ಷಾಂತರ ರೂ. ನಷ್ಟು ಹಾನಿಯಾಗಿರುವ ಘಟನೆ ಬ್ರಹ್ಮಾವರದ ಹೇರಾಡಿಯಲ್ಲಿ ನಡೆದಿದೆ.
ಕುಂಙ್ಙಿ ಮಹ್ಮದ್ ಎಂಬುವರ ಮನೆ ವಿದ್ಯುತ್ ಸ್ಪರ್ಶಕ್ಕೆ ಅರ್ಧ ಭಾಗ ಸುಟ್ಟು ಭಸ್ಮವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬರಲು ವಿಳಂಬವಾದ ಹಿನ್ನೆಲೆ ಸ್ಥಳೀಯರೇ ಬೆಂಕಿ ನಂದಿಸಿದ್ದಾರೆ. ವಿದ್ಯುತ್ ಅವಘಡದಿಂದ ಸುಮಾರು 6 ಲಕ್ಷ ರೂ. ನಷ್ಟ ಸಂಭವಿಸಿದೆ. ಕೊಠಡಿಗಳು, ಮನೆಯೊಳಗಿದ್ದ ವಸ್ತುಗಳೆಲ್ಲ ಸುಟ್ಟು ಕರಕಲಾಗಿವೆ. ಮನೆ ಗೋಡೆಗಳು ವಿದ್ಯುತ್ ಶಾಕ್ಗೆ ಬಿರುಕು ಬಿಟ್ಟಿದ್ದು, ಫ್ರಿಡ್ಜ್- ವಾಶಿಂಗ್ ಮಷೀನ್ ಭಸ್ಮವಾಗಿವೆ.