ಉಡುಪಿ: ಹೌಸ್ ಫುಲ್ ಚಿತ್ರಪ್ರದರ್ಶನಕ್ಕೆ ರಾಜ್ಯ ಸರ್ಕಾರ ಅನುಮತಿ ಕೊಟ್ಟಿದೆ. ಉಡುಪಿಯಲ್ಲಿ ಎಲ್ಲ ಚಿತ್ರಮಂದಿರಗಳು ಓಪನ್ ಆಗಿವೆ. 11 ತಿಂಗಳ ನಂತರ ಥಿಯೇಟರ್ಗಳು ತೆರೆದುಕೊಂಡರೂ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೊದಲು ದಿನವಾದ ಇಂದು ಕಲ್ಪನಾ ಥಿಯೇಟರ್ಗೆ 40 ಜನ ಇನ್ಸ್‌ಪೆಕ್ಟರ್ ವಿಕ್ರಂನನ್ನು ನೋಡೋದಕ್ಕೆ ಬಂದಿದ್ದರು. ಶುಚಿತ್ವ, ಕೋವಿಡ್ ನಿಯಮ ಪಾಲಿಸಲಾಗಿದೆ. ಚಿತ್ರ ಮಂದಿರದೊಳಗಿನ ಅಂಗಡಿಗಳಿಗೂ ಹೊಸ ಟಚ್ ಕೊಡಲಾಗಿದೆ.
ಓದಿ-ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರಿಗೆ ಅನುಮತಿ...ಮೊದಲ ದಿನದ ಸಂಭ್ರಮ ಹೇಗಿತ್ತು...?
ನಗರದ ಅಲಂಕಾರ್ ಚಿತ್ರ ಮಂದಿರಕ್ಕೆ ಶ್ಯಾಡೋ ಲಗ್ಗೆಯಿಟ್ಟಿದೆ. ಚಿತ್ರಕ್ಕೆ ಸ್ಟೇ ಬಂದಿರೋದರಿಂದ ಮಾರ್ನಿಂಗ್ ಶೋ ರದ್ದಾಗಿದೆ. ಈ ಬೆಳವಣಿಗೆ ಥಿಯೇಟರ್ ಮಾಲೀಕರಿಗೆ ಮತ್ತು ಜನರಿಗೆ ನಿರಾಸೆಯಾಗಿದೆ.
ಸ್ಟಾರ್ ಕಾಸ್ಟ್ ಇರೊ ಚಿತ್ರ ರಿಲೀಸಾದ್ರೆ ಬ್ಯುಸಿನೆಸ್ ಪಿಕಪ್ ಆಗುತ್ತೆ, ಜನ ಥಿಯೇಟರ್ ಕಡೆ ಬರ್ತಾರೆ ಅನ್ನೋ ನಂಬಿಕೆ ಮಾಲೀಕರಿಗಿದೆ. ಸುದೀಪ್ ,ದರ್ಶನ್ , ಯಶ್ ಶಿವರಾಜ್ ಕುಮಾರ್, ಪುನೀತ್, ಧೃವ ಸರ್ಜಾ ಚಿತ್ರಗಳು ಬರಬೇಕು ಅಂತ ಚಿತ್ರ ಪ್ರೇಕ್ಷಕರು ಕಾಯುತ್ತಿದ್ದಾರೆ.