ETV Bharat / state

ಕುಡಿಯುವ ನೀರಿಲ್ಲದೆ ಉಡುಪಿಯ 11 ಶಾಲೆಗಳಿಗೆ ಅರ್ಧ ದಿನ ರಜೆ! - ಹಾಫ್

ಬರದ ಕಾರಣ ಉಡುಪಿ ಜಿಲ್ಲೆಯ ಸುಮಾರು 77 ಶಾಲೆಗಳು ನೀರಿನ ಅಭಾವ ಎದುರಿಸುತ್ತಿದ್ದು, 11 ಶಾಲೆಗಳ ತರಗತಿಗಳನ್ನು ನೀರಿಲ್ಲದ ಕಾರಣ ಅರ್ಧ ದಿನಕ್ಕೆ ಮೊಟಕುಗೊಳಿಸಿ ಮಕ್ಕಳನ್ನು ಮನೆಗೆ ಕಳುಹಿಸಲಾಗುತ್ತಿದೆ.

ಕುಡಿಯುವ ನೀರಿಲ್ಲದೇ ಶಾಲೆಗಳಿಗೆ ಹಾಫ್ ಡೇ ರಜೆ
author img

By

Published : Jun 8, 2019, 4:44 PM IST

ಉಡುಪಿ: ಶಾಲಾ ಶಿಕ್ಷಕರಿಲ್ಲದೆ ಅಥವಾ ಮಕ್ಕಳಿಲ್ಲದೆ ಬೀಗ ಹಾಕುವುದನ್ನು ಸಾಮಾನ್ಯವಾಗಿ ಕಂಡಿರುತ್ತೇವೆ. ಆದರೆ ಉಡುಪಿ ಜಿಲ್ಲೆಯ ಸುಮಾರು 77 ಶಾಲೆಗಳಲ್ಲಿ ನೀರಿನ ಅಭಾವ ಉಂಟಾಗಿದ್ದು, ಜಿಲ್ಲೆಯ 11 ಶಾಲೆಗಳಿಗೆ ಆಫ್​ ಡೇ ರಜೆ ಘೋಷಿಸಲಾಗಿದೆ.

ಈ ಬೇಸಿಗೆಯಲ್ಲಿ ಉಡುಪಿಯಲ್ಲಿ ನೀರಿಲ್ಲ. ಇತಿಹಾಸದಲ್ಲೇ ಎಂದೂ ಕಾಣದ ಬರದ ಛಾಯೆ ಆವರಿಸಿದೆ. ಶಾಲಾ ಅಧ್ಯಾಪಕರು ದಿನಬೆಳಗಾದ್ರೆ ನೀರಿಗಾಗಿ ಬಾವಿಗಳನ್ನು ಹುಡುಕುವ ಸ್ಥಿತಿ ಬಂದಿದೆ. ಈ ಬಾರಿ 77 ಶಾಲೆಗಳು ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿವೆ. ಈ ಪೈಕಿ ಹನ್ನೊಂದು ಶಾಲೆಗಳು ತರಗತಿಯನ್ನು ಅರ್ಧ ದಿನಕ್ಕೆ ಮೊಟಕುಗೊಳಿಸಿವೆ. ಈ ವಿಚಾರ ತಿಳಿದ ಶಿಕ್ಷಣ ಇಲಾಖೆ ಯಾವುದೇ ಕಾರಣಕ್ಕೂ ಶಾಲೆಯನ್ನು ಮುಚ್ಚಬಾರದು ಎಂದು ಆದೇಶ ಮಾಡಿದೆ. ನೀರಿಲ್ಲ ಅಂದ್ರೆ ಮಕ್ಕಳಿಗೆ ಬಿಸಿಯೂಟ ಕೊಡೋದು ಹೇಗೆ? ಶಾಲೆಗಳಲ್ಲಿ ಶೌಚಾಲಯ ನಿರ್ವಹಣೆ ಮಾಡೋದು ಹೇಗೆ? ಅನ್ನೋದು ಶಾಲಾ ಆಡಳಿತ ಮಂಡಳಿಗಳಿಗೆ ದೊಡ್ಡ ತಲೆನೋವಾಗಿದೆ.

ಕುಡಿಯುವ ನೀರಿಲ್ಲದೇ ಶಾಲೆಗಳಿಗೆ ಹಾಫ್ ಡೇ ರಜೆ

ಉಡುಪಿ ನಗರದ ಜೀವನದಿ ಸ್ವರ್ಣಾ ಬತ್ತಿ ಹೋಗಿದೆ. ವಾರ್ಡ್​ಗೆ ಒಂದು ಬಾರಿ, ಒಂದು ವಾರಗಳ ಕಾಲ ಮಾತ್ರ ಸರಬರಾಜು ಮಾಡುವಷ್ಟು ನೀರು ಸ್ಟಾಕ್ ಇದೆ. ಹಾಗಾಗಿ ಶಾಲೆಗಳಿಗೆ ನೀರು ಸರಬರಾಜು ಮಾಡಲು ಸಾಧ್ಯವಿಲ್ಲ ಎಂದು ನಗರಸಭಾ ಕಮಿಷನರ್ ಕಟ್ಟುನಿಟ್ಟಾಗಿ ಹೇಳಿದ್ದಾರೆ. ಎಲ್ಲಿಂದಲೋ ಬರುವ ಟ್ಯಾಂಕರ್ ನೀರು ಬಳಸಿ, ಮಕ್ಕಳ ಆರೋಗ್ಯ ಹದಗೆಟ್ರೆ ಏನು ಮಾಡೋದು ಅಂತ ಪೋಷಕರಿಗೆ, ಶಿಕ್ಷಕರಿಗೆ ಆತಂಕ ಉಂಟಾಗಿದೆ. ಟ್ಯಾಂಕರ್ ನೀರಿನ ಶುದ್ಧತೆಯನ್ನು ಪರಿಶೀಲಿಸುವುದು ಕೂಡಾ ಶಾಲೆಗಳಿಗೆ ದೊಡ್ಡ ತಲೆನೋವಾಗಿದೆ. ಇನ್ನೂ ಒಂದು ವಾರ ಕಾಲ ಮಳೆ ಬರೋದು ಡೌಟು. ಹಾಗಾಗಿ ಶಾಲಾ ಅವಧಿಯನ್ನು ಮೊಟಕುಗೊಳಿಸುವುದು ಅಥವಾ ಶಾಲೆಗಳಿಗೆ ರಜೆ ನೀಡೋದೇ ಉತ್ತಮ ಎಂದು ಪೋಷಕರು ಅಭಿಪ್ರಾಯಪಟ್ಟಿದ್ದಾರೆ.

sample description

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.