ETV Bharat / state

ಸುಮ್ನೆ ಯಾರೂ ಆತ್ಮಹತ್ಯೆ ಮಾಡ್ಕೊಳಲ್ಲ, ತನಿಖೆಯಿಂದ ಎಲ್ಲಾ ಹೊರಬರಲಿ : ಡಿಕೆಶಿ

ಸಿಡಿ ಇದೆಯೋ ಇಲ್ವೋ, ರೆಕಾರ್ಡ್ ಇತ್ತೋ ಇಲ್ವೋ ಎಲ್ಲಾ ಹೊರ ಬರಲಿ. ಸಣ್ಣ ವಯಸ್ಸಿನಲ್ಲಿ ಉನ್ನತ ಸ್ಥಾನಮಾನ ಸಿಕ್ಕಿದೆ. ಈ ವಯಸ್ಸಿನಲ್ಲಿ ಸುಮ್ನೆ ಯಾರೂ ಆತ್ಮಹತ್ಯೆ ಮಾಡ್ಕೊಳಲ್ಲ. ಅಧಿಕಾರಕ್ಕೆ ತೊಂದರೆ ಆಗಿರಬೇಕು, ಹೆಸರಿಗೆ ಕುಂದು ಬಂದಿರಬಹುದು..

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
author img

By

Published : Nov 29, 2020, 6:05 PM IST

ಉಡುಪಿ : ಸಿಎಂ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆ ಯತ್ನ ವಿಚಾರಕ್ಕೆ ಸಂಬಂಧಿಸಿದಂತೆ ವಿಡಿಯೋ ಬಿಡುಗಡೆ ಮಾಡ್ತೀನಿ ಎಂದು ನಾನು ಹೇಳಿಲ್ಲ. ಈಗಾಗಲೇ, ಓರ್ವ ಮಾಧ್ಯಮ ಕಾರ್ಯದರ್ಶಿ ರಾಜೀನಾಮೆ ಕೊಟ್ಟಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಅಂದ್ರೆ ರಸ್ತೆಯಲಿ‌ ಹೋಗೋರಲ್ಲ.

ಸಾಮಾನ್ಯ ಕಾರ್ಯಕರ್ತನೂ ಅಲ್ಲ. ಬಿಜೆಪಿಯ ಎಲ್ಲಾ ರಾಜಕೀಯ ಬೆಳವಣಿಗೆ ವೇಳೆ ಸಂತೋಷ್ ಹೆಸರು ಕೇಳಿಬರುತ್ತೆ. ಅವರ ಎಲ್ಲಾ ವ್ಯವಹಾರಗಳು ನಮಗೆ ಗೊತ್ತಿಲ್ಲದೆ ಏನಿಲ್ಲ. ಸರ್ಕಾರ ರಚನೆ ವೇಳೆ ಅವರ ಕಾರ್ಯಾಚರಣೆ ನೋಡಿದ್ದೇವೆ. ನನಗೆ ಗೊತ್ತಿರುವ ಮಾಹಿತಿ ತಿಳಿಸಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ತನಿಖೆಯಿಂದ ಎಲ್ಲಾ ಹೊರಬರಲಿ- ಡಿಕೆಶಿ

ಸಂಸಾರದಲ್ಲಿ ಯಾವುದೇ ಬಿರುಕಿರಲಿಲ್ಲ ಎಂದು ಈಗಾಗಲೇ ಪತ್ನಿ ಹೇಳಿದ್ದಾರೆ. ರಾಜಕೀಯ ಒತ್ತಡವೇ ಆತ್ಮಹತ್ಯೆ ಯತ್ನಕ್ಕೆ ಕಾರಣ ಎಂದಿದ್ದಾರೆ. ಪ್ರತಿಪಕ್ಷದ ಅಧ್ಯಕ್ಷನಾಗಿದ್ದು, ಕಣ್ಣುಮುಚ್ಚಿ‌ಕೊಂಡು ಇರೋಕೆ ಆಗಲ್ಲ. ರಾಜ್ಯದ ಜನತೆಗೆ ತಿಳಿಸೋದು ನನ್ನ ಜವಾಬ್ದಾರಿ. ಗೃಹ ಸಚಿವರು ತನಿಖೆ ಮಾಡ್ತೇನೆ ಅಂದಿದ್ದಾರೆ.

ಸಿಡಿ ಇದೆಯೋ ಇಲ್ವೋ, ರೆಕಾರ್ಡ್ ಇತ್ತೋ ಇಲ್ವೋ ಎಲ್ಲಾ ಹೊರ ಬರಲಿ. ಸಣ್ಣ ವಯಸ್ಸಿನಲ್ಲಿ ಉನ್ನತ ಸ್ಥಾನಮಾನ ಸಿಕ್ಕಿದೆ. ಈ ವಯಸ್ಸಿನಲ್ಲಿ ಸುಮ್ನೆ ಯಾರೂ ಆತ್ಮಹತ್ಯೆ ಮಾಡ್ಕೊಳಲ್ಲ. ಅಧಿಕಾರಕ್ಕೆ ತೊಂದರೆ ಆಗಿರಬೇಕು, ಹೆಸರಿಗೆ ಕುಂದು ಬಂದಿರಬಹುದು ಎಂದರು.

ಕೆಲ ಬಿಜೆಪಿ ನಾಯಕರು ಮೈ ಪರಚಿಕೊಳ್ತಾ ಇದ್ದಾರೆ. ನಾನೇನೂ ಈಶ್ವರಪ್ಪ ಸುದ್ದಿ ಮಾತನಾಡಿಲ್ಲ. ಯಾರು ಎಲ್ಲೆಲ್ಲಿ ಏನೇನು‌ ಕೊಟ್ಟಿದ್ದಾರೆ ನಮಗೂ ಗೊತ್ತು. ನಮಗೆ ಅವಶ್ಯಕತೆ ಇಲ್ಲದ ವಿಚಾರ ಅಂತಾ ಸುಮ್ನಿದ್ದೇವೆ ಎಂದರು.

ಇದೇ ವೇಳೆ ನಮ್ಮ ಸರ್ಕಾರ ಬೀಳಲು ಡಿಕೆಶಿ ಕಾರಣ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಏನು ಬೇಕಾದ್ರೂ ಮಾತಾಡ್ಲಿ. ಅವರು ಹಿರಿಯರಿದ್ದಾರೆ. ಇಷ್ಟು ಜಲ್ದಿ ಹೇಳ್ತಾ ಇದಿರಲ್ವಾ ? ಎಂದು ಡಿಕೆಶಿ ವ್ಯಂಗ್ಯವಾಡಿದ್ರು.

ಹೈದರಾಬಾದ್​ನ ಜನತೆ ಟಿಆರ್​ಎಸ್​, ಓವೈಸಿ ಆಡಳಿತದಿಂದ ಬೇಸತ್ತಿದ್ದಾರೆ : ಅಮಿತ್​ ಶಾ

ನಾಳೆ ಹಿರಿಯ ಪಕ್ಷದ ನಾಯಕರ ಸಭೆ:

ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಮಾತನಾಡಿದ ಅವರು, ರಾಜ್ಯ ಸಂಪುಟ ವಿಸ್ತರೆಣೆ ಅವರ ಆಂತರಿಕ ವಿಚಾರ. ಕಾಂಗ್ರೆಸ್ ಪಕ್ಷಕ್ಕೂ ಬಿಜೆಪಿ ಇಂಟರ್​​​ನಲ್ ವಿಷಯಕ್ಕೂ ಸಂಬಂಧ ಇಲ್ಲ. ಲವ್ ಜಿಹಾದ್ ಕಾನೂನು ತರುವ ಮೊದಲು ಕೇಂದ್ರದತ್ತ ಒಮ್ಮೆ ನೋಡಿ.

ಯಾವ ಲೀಡರ್ ಮಕ್ಕಳು ಯಾರನ್ನು ಲವ್ ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಲಿ. ಬಿಜೆಪಿ ಇರ್ಲಿ, ಕಾಂಗ್ರೆಸ್ ಇರ್ಲಿ, ಪಾರ್ಟಿ ಯಾವುದೇ ಇರಲಿ. ಭಾರತ ದೇಶದಲ್ಲಿ ಅವರ ಪ್ರೀತಿ ಅವರ ಹಕ್ಕು. ಧರ್ಮ, ವಿಶ್ವಾಸ, ಮಾನವೀಯತೆ ಎಲ್ಲವೂ ಗೌರವಿಸೋದು ಮುಖ್ಯ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.