ETV Bharat / state

ಕೊರೊನಾ ಜೊತೆ ಡೆಂಘೀ : ತೀವ್ರ ಆತಂಕದಲ್ಲಿ ಕಾರ್ಕಳ ಜನತೆ - ಉಡುಪಿ ಸುದ್ದಿ

ಹೆಚ್ಚು ಕೃಷಿಕರೇ ಹೊಂದಿರುವ ಮಾಳ ಗ್ರಾಮದಲ್ಲಿ ಅತಿಯಾದ ಅಡಿಕೆ ಬೆಳೆ ಹಾಗೂ ರಬ್ಬರ್ ಬೆಳೆಯುತ್ತಿದ್ದು, ಅಡಿಕೆ ಮರದಿಂದ ಉದುರುವ ಹಾಳೆಗಳು ಸೊಳ್ಳೆಗಳ ಅವಾಸ್ಥಾನವಾಗಿ ಮಾರ್ಪಟ್ಟು ಈ ಡೆಂಘೀ ಹರಡಲು ಕಾರಣವಾಗಿದೆ.

Dengue cases found in Karkala
ಕಾರ್ಕಳದಲ್ಲಿ ಡೆಂಘೀ
author img

By

Published : May 20, 2020, 10:21 AM IST

ಕಾರ್ಕಳ( ಉಡುಪಿ): ತಾಲೂಕಿನ ಮಾಳ ಗ್ರಾಮ ವ್ಯಾಪ್ತಿಯಲ್ಲಿ ಡೆಂಘೀ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿದ್ದು. ಒಂದೇ ತಿಂಗಳಿನಲ್ಲಿ 13 ಮಂದಿ ಡೆಂಘೀ ಜ್ವರಕ್ಕೆ ಗುರಿಯಾಗಿದ್ದಾರೆ. ಅದೇ ಗ್ರಾಮದಲ್ಲಿ 15 ಕ್ಕೂ ಹೆಚ್ಚು ಮಂದಿ ಡೆಂಘೀ ಶಂಕಿತರು ಪತ್ತೆಯಾಗಿದ್ದಾರೆ.

ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾದ ಮಾಳ ಗ್ರಾಮದಲ್ಲಿ ಹೆಚ್ಚಾಗಿ ಈ ಡೆಂಘೀ ಹಬ್ಬಿದ್ದು ಇದೀಗ ಕೊರೊನಾ ಸಾಂಕ್ರಮಿಕ ರೋಗದ ಭಯದ ಜೊತೆಗೆ ಡೆಂಘೀ ಮಹಾಮರಿ ಕಾಯಿಲೆಯ ಭಯದಿಂದ ಜೀವಿಸುವಂತಾಗಿದೆ.

ಸೊಳ್ಳೆ ಉಗಮ ಸ್ಥಾನಗಳಿಗೆ ಔಷಧಿ ಸಿಂಪಡಣೆ
ಸೊಳ್ಳೆ ಉಗಮ ಸ್ಥಾನಗಳಿಗೆ ಔಷಧಿ ಸಿಂಪಡಣೆ

ಹೆಚ್ಚು ಕೃಷಿಕರೇ ಹೊಂದಿರುವ ಮಾಳ ಗ್ರಾಮದಲ್ಲಿ ಅತೀಯಾದ ಅಡಿಕೆ ಬೆಳೆ ಹಾಗೂ ರಬ್ಬರ್ ಬೆಳೆಯುತ್ತಿದ್ದು, ಅಡಿಕೆ ಮರದಿಂದ ಕಾಲಕ್ರಮೇಣ ಉದುರುವ ಹಾಳೆಗಳು ಸೊಳ್ಳೆಗಳ ಅವಾಸ್ಥಾನವಾಗಿ ಮಾರ್ಪಟ್ಟು ಈ ಡೆಂಘೀ ಹರಡಲು ಕಾರಣವಾಗಿದೆ.

ಡೆಂಘೀ ಜ್ವರ ಲಕ್ಷಣ:

  • ಇದ್ದಕ್ಕಿದ್ದಂತೆ ತೀವ್ರ ಜ್ವರ ಕಾಣಿಸಿಕೊಳ್ಳುವುದು
  • ಕಣ್ಣಿನ ಹಿಂಭಾಗದದಲ್ಲಿ ವಿಪರೀತ ನೋವು
  • ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು

3 ಹಂತವಾಗಿ ವಿಂಗಡನೆ:

ವಿಪರೀತ ಜ್ವರ ಮೊದಲ ಹಂತವಾಗಿದೆ. ಎರಡನೇ ಹಂತದಲ್ಲಿ ರೋಗನಿರೋಧಕ ಶಕ್ತಿ ಕುಗ್ಗುವುದು, ರಕ್ತಸ್ರಾವ. ಮೂರನೇ ಹಂತದಲ್ಲಿ ಬಿ.ಪಿ (ರಕ್ತದ ಒತ್ತಡ) ಕಡಿಮೆಯಾಗುವುದು.

ಸೊಳ್ಳೆ ಉಗಮ ಸ್ಥಾನಗಳಿಗೆ ಔಷಧಿ ಸಿಂಪಡಣೆ
ಸೊಳ್ಳೆ ಉಗಮ ಸ್ಥಾನಗಳಿಗೆ ಔಷಧಿ ಸಿಂಪಡಣೆ

ಡೆಂಘೀ ಜ್ವರ ನಿಯಂತ್ರಣ ಕ್ರಮಗಳು:

ಮನೆಯೊಳಗೆ ಅಥವಾ ಮೇಲ್ಚಾವಣಿಯ ನೀರಿನ ತೊಟ್ಟಿಗಳಲ್ಲಿ ವಾರಕ್ಕೊಮ್ಮೆ ನೀರನ್ನು ಖಾಲಿ ಮಾಡಿ, ಉಜ್ಜಿ ಒಣಗಿಸಿ, ಮತ್ತೆ ಭರ್ತಿ ಮಾಡಿ ಭದ್ರವಾಗಿ ಮುಚ್ಚಳಿಕೆಯಿಂದ ಮುಚ್ಚುವುದು. ಎಲ್ಲೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು. ಒಡೆದ ಬಾಟಲಿ, ಟಿನ್, ಟೈರುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.ಏರ್ ಕೂಲರ್‌ಗಳಲ್ಲಿನ ನೀರನ್ನು ಆಗಾಗ ಬದಲಾಯಿಸಬೇಕು. ಯಾವಾಗಲೂ ಮೈ ತುಂಬಾ ಬಟ್ಟೆ ಧರಿಸಬೇಕು. ಹಗಲಲ್ಲಿ ನಿದ್ರೆ ಮಾಡುವ ಮಕ್ಕಳು ಮತ್ತು ವಿಶ್ರಾಂತಿ ಪಡೆವ ವಯಸ್ಸಾದವರು ತಪ್ಪದೇ ಸೊಳ್ಳೆ ಪರದೆ ಬಳಸಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.