ಉಡುಪಿ: ಸಾಸ್ತಾನ ಪ್ರದೇಶದಲ್ಲಿ ಸರ್ವೀಸ್ ರಸ್ತೆಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ವತಿಯಿಂದ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಮಾಬುಕಳ ಬಸ್ ಸ್ಟ್ಯಾಂಡ್ ಮೂಲಕ ಆರಂಭಗೊಂಡ ಪ್ರತಿಭಟನಾ ಪಾದಯಾತ್ರೆಗೆ ವಿವಿಧ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿತ್ತು. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಸಾಸ್ತಾನ ಪ್ರದೇಶದಲ್ಲೂ
z ಟೋಲ್ ಆರಂಭಗೊಂಡಿದ್ದು , ಇದರ ಜೊತೆ ಸರ್ವೀಸ್ ರಸ್ತೆ ಕೂಡಾ ಆಗಬೇಕಿತ್ತು. ಆದ್ರೆ ಕೆಲಸ ನಿರ್ವಹಿಸಿದ ನವಯುಗ ಕಂಪೆನಿ ಬರೀ ಟೋಲ್ ವಸೂಲಿ ಮಾಡುವುದರಲ್ಲಿ ನಿರತವಾಗಿದ್ದು, ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹಿಂದೆ ಬಿದ್ದಿದೆ. ಸೈಕಲ್ ಸವಾರರು, ಪಾದಚಾರಿಗಳು , ವಾಹನ ಸವಾರರು ಪ್ರತಿನಿತ್ಯ ಸಂಭವಿಸುತ್ತಿರುವ ಅಫಘಾತ, ಅವಘಡದಿಂದಾಗಿ ನರಕಯಾತನೆ ಅನುಭವಿಸುವಂತಾಗಿದೆ.
ಮಾಬುಕಳದಿಂದ ಆರಂಭವಾದ ಪಾದಯಾತ್ರೆ ಸಾಸ್ತಾನ ಸಾಲಿಗ್ರಾಮ ಮೂಲಕ ಸಾಗಿ ಕೋಟದಲ್ಲಿ ಸಮಾಪನಗೊಂಡಿತು. ಪ್ರತಿಭಟನೆಯಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.