ETV Bharat / state

ಸೇಫ್​​ ಆಗಿದ್ದ ಉಡುಪಿ‌ ಜಿಲ್ಲೆಗೆ ಮತ್ತೆ ಆವರಿಸಿದ ಕೊರೊನಾ ಆತಂಕ!

author img

By

Published : May 11, 2020, 8:56 PM IST

13 ಮಂದಿಯಲ್ಲಿ ಇಬ್ಬರ ವರದಿ‌ ನೆಗೆಟಿವ್ ಬಂದಿದ್ದು, ‌ಇನ್ನುಳಿದ 11 ಮಂದಿಯ ವರದಿಗಾಗಿ ಆರೋಗ್ಯಾಧಿಕಾರಿಗಳು ಎದುರು‌ ನೋಡುತ್ತಿದ್ದಾರೆ. ಇಷ್ಟೇ ಅಲ್ಲ ತಮಿಳುನಾಡಿನಿಂದ ಆಗಮಿಸಿದ ಕಾರ್ಮಿಕನಿಗೆ ಪಾಸಿಟಿವ್ ಇರೋದು ದೃಢವಾಗಿದೆ.

Corona anxiety again in Udupi district
ಸೇಫ್ಆಗಿದ್ದ ಉಡುಪಿ‌ ಜಿಲ್ಲೆಗೆ ಮತ್ತೆ ಕೊರೊನಾ ಆತಂಕ ಆವರಿಸಿದೆ..!

ಉಡುಪಿ: ಗ್ರೀನ್ ‌ಝೋನ್​​ನಲ್ಲಿ‌ ಸೇಫ್​ ಆಗಿದ್ದ‌ ಜಿಲ್ಲೆಗೆ ಮತ್ತೆ ಕೊರೊನಾ ಆತಂಕ‌ ಆವರಿಸಿದೆ.‌ ಮಂಗಳೂರಿನ‌ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ರೋಗಿಯೊಂದಿಗೆ ಪ್ರಾಥಮಿಕ‌ ಸಂಪರ್ಕ ಹೊಂದಿದ್ದ 13 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಇದೀಗ ಈ 13 ಮಂದಿಯಲ್ಲಿ ಇಬ್ಬರ ವರದಿ‌ ನೆಗೆಟಿವ್ ಬಂದಿದ್ದು, ‌ಇನ್ನುಳಿದ 11 ಮಂದಿಯ ವರದಿಗಾಗಿ ಆರೋಗ್ಯಾಧಿಕಾರಿಗಳು ಎದುರು‌ ನೋಡುತ್ತಿದ್ದಾರೆ. ಇಷ್ಟೇ ಅಲ್ಲ ತಮಿಳುನಾಡಿನಿಂದ ಆಗಮಿಸಿದ ಕಾರ್ಮಿಕನಿಗೆ ಪಾಸಿಟಿವ್ ಇರೋದು ದೃಢವಾಗಿದೆ. ಈ ಕಾರ್ಮಿಕನ‌ ಸಂಪರ್ಕಕ್ಕೆ ಬಂದಿದ್ದ ಕಾರ್ಕಳದ ಮೂವರು ಕಾರ್ಮಿಕರು ಹಾಗೂ ಸ್ಥಳದಲ್ಲಿದ್ದ ವಲಸೆ ಕಾರ್ಮಿಕ ಸೇರಿ ಒಟ್ಟು ನಾಲ್ವರನ್ನ ಕ್ವಾರಂಟೈನ್​​ಗೆ ಒಳಪಡಿಸಲಾಗಿದೆ.

ಈ ನಾಲ್ಕು ಮಂದಿಯ ಗಂಟಲು‌ ದ್ರವ ಟೆಸ್ಟ್​​ಗೆ ಕಳುಹಿಸಲಾಗಿದೆ. ತಮಿಳುನಾಡಿನ ಸೋಂಕಿತ ಕಾರ್ಕಳ ನಗರದಲ್ಲಿ ಸಿಮೆಂಟ್ ಇಳಿಸಿ ‌ತಮಿಳುನಾಡಿಗೆ ತೆರಳಿದ್ದ ಎಂದು‌ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.