ಉಡುಪಿ: ಸುಷ್ಮಾ ಸ್ವರಾಜ್ ನಿಧನಕ್ಕೆ ಪೇಜಾವರ ಶ್ರೀ ಸಂತಾಪ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಈ ಬಗ್ಗೆ ಹೇಳಿಕೆಯನ್ನ ನೀಡಿರುವ ಶ್ರೀಗಳು, ಸುಷ್ಮಾ ಸ್ವರಾಜ್ ನಿಧನದ ಸುದ್ದಿ ಕೇಳಿ ದುಃಖವಾಗಿದೆ.ಅವರ ರಾಷ್ಟ್ರ ಸೇವೆ ಅಮೋಘವಾದದ್ದು.ವಿದೇಶ ಮಂತ್ರಿಯಾಗಿ ಉತ್ತಮ ಕಾರ್ಯ ಮಾಡಿದ್ದಾರೆ. ಅಷ್ಟೇ ಅಲ್ಲದೇ ವಿದೇಶಗಳು ಕೂಡಾ ಸುಷ್ಮಾ ಸ್ವರಾಜ್ ಕಾರ್ಯವನ್ನು ಶ್ಲಾಘಿಸಿವೆ ಎಂದರು.
ಅಲ್ಲದೇ ನಮ್ಮ ಜೊತೆ ಹಲವಾರು ವರ್ಷಗಳಿಂದ ಸಂಪರ್ಕದಲ್ಲಿದ್ದರು.ಅವರು ಸಂಘಟನೆ ಮತ್ತು ಆಡಳಿತ ನಡೆಸುವ ಸಮರ್ಥ ನಾಯಕಿ.ಅವರ ನಿಧನದಿಂದ ರಾಷ್ಟ್ರಕ್ಕೆ ದೊಡ್ಡ ನಷ್ಟವಾಗಿದೆ.ಹಾಗೆಯೇ ಕಾಶ್ಮೀರ ಗೊಂದಲ ಪರಿಹಾರ ಕೊನೆಯ ಆಸೆಯಾಗಿತ್ತು ಎಂಬ ಅವರ ಟ್ವೀಟ್‌ನಿಂದ ರಾಷ್ಟ್ರಾಭಿಮಾನ ಬಹಿರಂಗವಾಗಿದೆ. ಅವರ ಶ್ರೇಷ್ಠ ಚೇತನಕ್ಕೆ ಭಗವಂತನ ಅನುಗ್ರಹವಾಗಲಿ ಎಂದು ಹಾರೈಸಿದ್ದಾರೆ.