ಉಡುಪಿ: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎಮ್ಮೆ ಕರುಗಳನ್ನ ರಕ್ಷಣೆ ಮಾಡಿ, ಆರೋಪಿಗಳನ್ನ ಬಂಧಿಸಿದ ಘಟನೆ ಜಿಲ್ಲೆಯ ಅಮಾಸೆಬೈಲು ಎಂಬಲ್ಲಿ ನಡೆದಿದೆ.
ಮೆಹಬೂಬ್, ಬಾಪು ಸಾಹೇಬ್, ಆಸಿಫ್ ಹಾಗೂ ಇಮ್ರಾನ್ ಬಂಧಿತ ಆರೋಪಿಗಳು. ಬಂಧಿತರು ದಾವಣಗೆರೆ ಹಾಗೂ ಬೆಳಗಾವಿ ಮೂಲದರಾಗಿದ್ದು, ಹುಲಿಕಲ್ ಘಾಟಿ ಕಡೆಯಿಂದ ಹೊಸಂಗಡಿ ಕಡೆಗೆ ಎಮ್ಮೆ ಕರುಗಳನ್ನು ಕಂಟೈನರ್‌ನಲ್ಲಿ ತುಂಬಿಕೊಂಡು ಬರುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಅಮಾಸೆಬೈಲು ಹೊಸಂಗಡಿ ಚೆಕ್ ಪೋಸ್ಟ್ ಬಳಿ ಕಂಟೈನರ್ ತಡೆದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಎಮ್ಮೆ ಕರುಗಳನ್ನು ರಕ್ಷಣೆ ಮಾಡಿದ್ದಾರೆ.
![ಅಕ್ರಮವಾಗಿ ಎಮ್ಮೆ ಕರುಗಳ ಸಾಗಾಟ](https://etvbharatimages.akamaized.net/etvbharat/prod-images/8816727_86_8816727_1600221368024.png)
ಕಂಟೈನರ್‌ನಲ್ಲಿ ಒಟ್ಟು 24 ಎಮ್ಮೆ ಕರುಗಳಿದ್ದು, ಹಿಂಸ್ಮಾತಕವಾಗಿ ಕಟ್ಟಿ ಹಾಕಲಾಗಿತ್ತು. ಅಮಾಸ್ಯೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.