ಉಡುಪಿ: ರಸ್ತೆ ಬದಿ ನಿಂತಿದ್ದ ದನಕ್ಕೆ ಆಹಾರ ನೀಡುವ ಉಪಾಯ ಮಾಡಿ ದನವನ್ನು ಕದ್ದೊಯ್ದಿರುವ ಘಟನೆ ಕುಂದಾಪುರದ ಜನ್ನಾಡಿಯಲ್ಲಿ ನಡೆದಿದೆ. ನಿನ್ನೆ ಬೆಳಗ್ಗಿನ ಜಾವದಲ್ಲಿ ಘಟನೆ ನಡೆದಿದ್ದು, ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಕಳ್ಳರ ಕೈಚಳಕ ಸೆರೆಯಾಗಿದೆ.
ಮಂಕಿ ಕ್ಯಾಪ್ ಧರಿಸಿದ್ದ ಕಳ್ಳರು ಕಾರಿನಲ್ಲಿ ಬಂದಿದ್ದು, ಯಾರೂ ಇಲ್ಲದ್ದನ್ನು ಗಮನಿಸಿದ ಅವರು, ದನ ಕದಿಯಲು ಮುಂದಾಗಿದ್ದಾರೆ. ರಸ್ತೆ ಬದಿಯ ಅಂಗಡಿಯ ಮುಂದೆ ನಿಂತಿದ್ದ ದನಕ್ಕೆ ಮೊದಲು ಆಹಾರ ಹಾಕಿದ್ದಾರೆ. ಬಳಿಕ ಅದನ್ನು ಹಿಡಿದು ಹಗ್ಗದಿಂದ ಅದನ್ನು ಕಟ್ಟಿದ್ದಾರೆ. ಬಳಿಕ ಕಾರಿನಲ್ಲಿ ತುಂಬಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಕಳ್ಳರ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಳ್ಳರ ಬಂಧನವಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: 102 ಬಾರಿ ಓಟಿಪಿ ಪಡೆದು ₹10 ಲಕ್ಷ ಎಗರಿಸಿದ್ದರು.. SSLC ಫೇಲಾದ್ರೂ ವಂಚಿಸೋದರಲ್ಲಿ ಫಸ್ಟ್‌ಕ್ಲಾಸ್..