ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಆಳ ಸಮುದ್ರ ಬೋಟುಗಳ ಮೇಲೆ ಮಹಾರಾಷ್ಟ್ರ ಮೀನುಗಾರರು ದಾಳಿ ಮಾಡಿ ಮೀನು ದೋಚಿರುವ ಘಟನೆ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಮಲ್ಪೆಯಿಂದ ತೆರಳಿದ್ದ ನಾಲ್ಕು ಬೋಟ್ಗಳ ಮೇಲೆ ಮಹಾರಾಷ್ಟ್ರದಿಂದ 40 ಕಿಮೀ ದೂರದ ಸಮುದ್ರ ಮಧ್ಯದಲ್ಲಿ ಅಲ್ಲಿನ ಮೀನುಗಾರರು ದಾಳಿ ಮಾಡಿದ್ದರು. ಕಷ್ಟ ಪಟ್ಟು ಹಿಡಿದಿದ್ದ ಸುಮಾರು ಎಂಟು ಲಕ್ಷ ಮೌಲ್ಯದ ಮೀನುಗಳನ್ನ ದೋಚಿಕೊಂಡು ಹೋಗಿದ್ದರು. ಈ ಪ್ರಕರಣ ಸಂಬಂಧ ಮಲ್ಪೆ ಕರಾವಳಿ ಕಾವಲು ಪಡೆ ಹಾಗೂ ಮಲ್ಪೆ ಪೊಲೀಸರಿಗೆ ಸ್ಥಳೀಯ ಮೀನುಗಾರರು ದೂರು ನೀಡಿದ್ದಾರೆ.
ಸಮುದ್ರ ಮದ್ಯದಲ್ಲಿ ಕರ್ನಾಟಕದ ಮೀನುಗಾರರ ಮೇಲೆ ಪದೇ ಪದೇ ದಾಳಿ ನಡೆಯುತ್ತಿದ್ದು, ಕಠಿಣ ಕ್ರಮ ಜರುಗಿಸುವಂತೆ ಮೀನುಗಾರರು ಒತ್ತಾಯಿಸಿದ್ದಾರೆ.