ಉಡುಪಿ: ಉಡುಪಿ-ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪೂರ್ಣ ಆಸ್ತಿ ವಿವರ ಸಲ್ಲಿಸದಿರುವ ಕಾರಣ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಕುರಿತು ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.
ಚುನಾವಣಾಧಿಕಾರಿಗಳಿಗೆ ಸತೀಶ್ ಎಂಬುವರು ಪ್ರಮೋದ್ ಪೂರ್ಣ ಆಸ್ತಿ ವಿವರ ದಾಖಲಿಸದೇ ಇರುವ ಕುರಿತು ದೂರು ನೀಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಸಂಸದೆ ಶೋಭಾ ಕರಂದ್ಲಾಜೆ ಚುನಾವಣಾಧಿಕಾರಿಗಳು ಈ ಕುರಿತು ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಹಾಗೂ ಕಾನೂನಿನ ಮೂಲಕ ಕ್ರಮ ಜರುಗಿಸಿ ಪ್ರಮೋದ್ ನಾಮಪತ್ರ ಮರುಪರಿಶೀಲನೆ ನಡೆಸಬೇಕು. ನಾಮಪತ್ರ ಜೊತೆಗಿನ ಅಫಿಡವಿಟ್ ಮರು ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.