ETV Bharat / state

ಮಂಡ್ಯದಲ್ಲಿ ಜೆಡಿಎಸ್ ಮುಗಿಸಲು ಎಲ್ಲರೂ ಹೊರಟಿದ್ದಾರೆ : ಸಿಎಂ ಕುಮಾರಸ್ವಾಮಿ - undefined

ಬಿಜೆಪಿ ಪ್ರಚಾರಕ್ಕೆ ಮೋದಿಯೇ ಮುಖ. ಮೋದಿ ಇಲ್ಲಾಂದ್ರೆ ದೇಶಕ್ಕೆ ರಕ್ಷಣೆ ಇಲ್ಲ ಅಂತಾ ಬಿಂಬಿಸಲಾಗ್ತಿದೆ ಎಂದು ಸಿಎಂ ಕುಮಾರಸ್ವಾಮಿ ಕಿಡಿಕಾರಿದರು.

ಉಡುಪಿ-ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪರ ಸಿಎಂ ಪ್ರಚಾರ
author img

By

Published : Apr 7, 2019, 10:43 PM IST

ಉಡುಪಿ: ಉಡುಪಿ-ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪರ ಪ್ರಚಾರಕ್ಕೆ ಸಿಎಂ ಇಂದು ಜಿಲ್ಲೆಗೆ ಆಗಮಿಸಿದ್ದು, ಕೇಂದ್ರ ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು.

ಮೊದಲು ಕಾರ್ಕಳದಲ್ಲಿ ಕಾರ್ಯಕರ್ತರ ಸಭೆ ಉದ್ಘಾಟಿಸಿದ ಸಿಎಂ, ಬಿಜೆಪಿಯನ್ನು ತರಾಟೆಗೆ ತಗೊಂಡ್ರು. ಬಿಜೆಪಿ ಪ್ರಚಾರಕ್ಕೆ ಮೋದಿಯೇ ಮುಖ. ಮೋದಿ ಇಲ್ಲಾಂದ್ರೇ ದೇಶಕ್ಕೆ ರಕ್ಷಣೆ ಇಲ್ಲ ಅಂತಾ ಬಿಂಬಿಸಲಾಗ್ತಿದೆ ಎಂದು ಕಿಡಿ ಕಾರಿದರು.

ಉಡುಪಿ-ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪರ ಸಿಎಂ ಪ್ರಚಾರ

ಕರಾವಳಿಯ ಮೂರು ಜಿಲ್ಲೆಗಳ ಜನರು ತಿಳುವಳಿಕೆ ಉಳ್ಳವರು, ಪ್ರಜ್ಞಾವಂತರು. ನಾನು ಕರಾವಳಿ ಜನರ ಬಗ್ಗೆ ಯಾವತ್ತೂ ಲಘುವಾಗಿ ಮಾತಾಡಿಲ್ಲ. ಊರಿಗೆ ಶಾಲೆ ಬೇಕು ಅಂದ್ರೇ ಕುಮಾರಸ್ವಾಮಿ ಬೇಕು. ಆದರೆ, ಯುವಕರು ಮೋದಿಗೆ ವೋಟ್ ಹಾಕ್ತೀವಿ ಅಂತಾರೆ. ಮೋದಿ ಒಬ್ರೇ ದೇಶ ರಕ್ಷಣೆ ಮಾಡಬಲ್ಲರು ಅಂತೀರಲ್ವಾ? ಹಾಗಾದ್ರೇ ವಾಜಪೇಯಿ ಈ ರಾಷ್ಟ್ರಕ್ಕೆ ಭದ್ರತೆ ಕೊಟ್ಟಿಲ್ವಾ?. ಮೋದಿ ಮಂಗಳೂರು ಮೂಲದ ಸಂಸ್ಥೆಗಳನ್ನ ದಿವಾಳಿ ಎಬ್ಬಿಸಿದ್ದಾರೆ. ವಿಜಯಾ ಬ್ಯಾಂಕ್ ಗುಜರಾತ್​ನ ಬರೋಡಾ ಬ್ಯಾಂಕ್​ಗೆ ವಿಲೀನ ಮಾಡಿದ್ರು. ವಿಜಯಾ ಬ್ಯಾಂಕ್ ಉಳಿವಿಗೆ ದೇವೇಗೌಡರು ಕೊಡುಗೆ ಕೊಟ್ಟಿದ್ದಾರೆ ಎಂದರು.

ನಾನು ಯಾವ ಬಾಂಬೂ ಹಾಕಿಲ್ಲ, ಬಾಂಬ್ ಹಾಕುವ ಕೆಲಸ ಬಿಜೆಪಿಗೆ ಬಿಟ್ಟಿದ್ದೇವೆ. ಅದು ನಮ್ಮ ಸಂಸ್ಕೃತಿಯೂ ಅಲ್ಲ, ಹಿಂದೆ ಇಂದಿರಾಗಾಂಧಿ ದೇಶದ ರಕ್ಷಣೆ ಮಾಡಿಲ್ವಾ? ಲಾಲ್ ಬಹದ್ದೂರ್ ಶಾಸ್ತ್ರಿ ಜೈ ಜವಾನ್ ಜೈ ಕಿಸಾನ್ ಅಂದಿದ್ದಾರೆ. ಈ ದೇಶದ ರಕ್ಷಣೆ ಮಾಡೋದು ಸೈನ್ಯದ ಮುಖ್ಯಸ್ಥರನ್ನು ದುರುಪಯೋಗ ಪಡಿಸಿಕೊಂಡು ಈ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಸೈನ್ಯ ನಿರ್ವಹಣೆ ಮಾಡೋದು ಪ್ರಧಾನಿ ಅಲ್ಲ, ರಾಷ್ಟ್ರಪತಿ ಎಂದರು.

ಮಂಡ್ಯದಲ್ಲಿ ನಾನು ನಮ್ಮ ಜೆಡಿಎಸ್ ಕಾರ್ಯಕರ್ತರ ಮೇಲೆ ಡಿಪೆಂಡ್ ಆಗಿದ್ದೇನೆ. ಯಾರು ಯಾರು ಏನೇನ್ ಮಾಡ್ತಾರೆ ಗೊತ್ತಿದೆ. ಮೂರು ತಿಂಗಳ ಹಿಂದೆಯಿಂದ ಎಲ್ಲವೂ ನಡೆಯುತ್ತಿರೋದು ಗೊತ್ತಿದೆ. ಅಂಬರೀಶ್ ದೇಹಕ್ಕೆ ಅಗ್ನಿ ಸ್ಪರ್ಶ ಆದ ಕೂಡಲೇ ರಾಜಕೀಯ ಆರಂಭವಾಗಿದೆ. ಮಂಡ್ಯದಲ್ಲಿ ಜೆಡಿಎಸ್ ನಿರ್ಣಾಮ ಮಾಡಲು ಎಲ್ಲರೂ ಹೊರಟಿದ್ದಾರೆ. ನಾನು ಚೆಲುವರಾಯಸ್ವಾಮಿ ಬಗ್ಗೆ ಮಾತೇ ಆಡಿಲ್ಲ, ಬೆನ್ನಿಗೆ ಚೂರಿ ಹಾಕುವವರ ಬಗ್ಗೆ ಮಾತನಾಡಿದ್ದೆ. ನಾನು ಚೆಲುವರಾಯಸ್ವಾಮಿ ಬೆನ್ನಿಗೆ ಚೂರಿ ಹಾಕುತ್ತಾರೆ ಅಂದಿಲ್ಲ, ನನ್ನ 8 ಶಾಸಕರನ್ನು ಜೊತೆಗೆ ನನ್ನನ್ನು ಮುಗಿಸಲು ಪ್ರಯತ್ನ ನಡೆಯುತ್ತಿದೆ. ನಿಖಿಲ್ ಸೋಲಿಸಿ ನನ್ನನ್ನು ಮುಗಿಸಲು ಎಲ್ಲಾ ಪ್ರಯತ್ನ ನಡೆದಿದೆ. ನಾನು ಮಂಡ್ಯಕ್ಕೆ ಹೋಗಿ 6 ದಿನ ಆಯ್ತು, ಜೆಡಿಎಸ್ ಕುತಂತ್ರ ಮಾಡುತ್ತಿಲ್ಲ. ಮಂಡ್ಯ ಜಿಲ್ಲೆ ನಮ್ಮ ಹೃದಯ ಇದ್ದಂತೆ. ಮಂಡ್ಯದ ನಾಡಿಮಿಡಿತ ನಮಗೆ ಗೊತ್ತಿದೆ. ಯಾರ ಡ್ರಾಮಾನೂ ಮಂಡ್ಯದಲ್ಲಿ ನಡೆಯೋದಿಲ್ಲ ಎಂದ್ರು.

ಮೈಸೂರಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲುತ್ತಾರೆ. ಮೈಸೂರು ಹಿನ್ನಡೆಯಾಗಲು ನಾನು ಬಿಡಲ್ಲ. ರಾಜ್ಯದಲ್ಲಿ ಎಲ್ಲೂ ಗೊಂದಲವಾಗಲು ಬಿಡಲ್ಲ. ಗೊಂದಲ ಬಗೆಹರಿಸಿ ಗೆಲ್ಲುವುದು ನನ್ನ ಜವಾಬ್ದಾರಿ. ನಾವು ಎಲ್ಲಾ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.