ETV Bharat / state

ಸ್ವಾತಂತ್ರ್ಯ ಸಂಭ್ರಮದಲ್ಲಿ ಕೊರೊನಾ ವಾರಿಯರ್ಸ್​ ಸ್ಮರಿಸಿದ ಕಲಾವಿದ

ಕೊರೊನಾ ಸಂಕಷ್ಟದಲ್ಲೂ ಹಗಲು-ರಾತ್ರಿಯೆನ್ನದೆ ದುಡಿಯುತ್ತಿರುವ ಕೊರೊನಾ ವಾರಿಯರ್ಸ್​​ಗಳಿಗೆ ವಿಶೇಷ ಕೃತಜ್ಞತೆ ಸಲ್ಲಿಸಲಾಗಿದೆ. ಕಲಾವಿದ ಶ್ರೀನಾಥ್ ಮಣಿಪಾಲ ಅವರು ವಿಭಿನ್ನ ಕಲಾಕೃತಿ ರಚಿಸಿ ಕೃತಜ್ಞತೆ ಅರ್ಪಿಸಿದ್ದಾರೆ.

Breaking News
author img

By

Published : Aug 14, 2020, 5:40 PM IST

ಉಡುಪಿ: ಸ್ವಾತಂತ್ರ್ಯ ದಿನಾಚರಣೆಗೆ ಕೊರೊನಾದ ಕರಿಛಾಯೆ ಬಿದ್ದಿದೆ. ಇಷ್ಟಾದರೂ ಜನರ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ. ಸರಳ ಆಚರಣೆಗೆ ಅವಕಾಶವಿದ್ದು, ನಾಳೆಯ ಸಂಭ್ರಮಕ್ಕೆ ತಯಾರಿ ನಡೆದಿದೆ.

ಅಲ್ಲದೆ ಹಲವರು ತಮ್ಮದೇ ರೀತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಗೆ ಮುಂದಾಗಿದ್ದಾರೆ. ಪ್ರಸಿದ್ಧ ಚಿತ್ರ ಕಲಾವಿದ ಶ್ರೀನಾಥ್ ಮಣಿಪಾಲ ವಿಶಿಷ್ಟ ಕಲಾಕೃತಿ ರಚಿಸಿದ್ದಾರೆ. 320 ಚದರಡಿ ಉದ್ದದ ಈ ಕಲಾಕೃತಿಯಲ್ಲಿ ಕೊರೊನಾ ವಾರಿಯರ್ಸ್​​ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ವೈದ್ಯರು, ಪೊಲೀಸರು, ನರ್ಸ್​ ಸೇರಿದಂತೆ ಮುಂಚೂಣಿಯಲ್ಲಿ ದುಡಿಯುತ್ತಿರುವ ವಾರಿಯರ್ಸ್​ಗೆ ಈ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆ ರಚಿಸಲಾದ ಈ ಕಲಾಕೃತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.