ಉಡುಪಿ: ಆರೋಗ್ಯ ಸೇತು ಆ್ಯಪ್ ತಂದ ಗೊಂದಲದಿಂದಾಗಿ ಕುಂದಾಪುರ ತಾಲೂಕಿನ ಬೈಂದೂರು ಜನತೆಯಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ಬೈಂದೂರಿನ ವ್ಯಕ್ತಿಯೊಬ್ಬರು ಬೆಳಗಾವಿಯಲ್ಲಿ ಗಂಟಲು ದ್ರವ ಪರೀಕ್ಷೆಗೆ ಕೊಟ್ಟು ಬಂದಿದ್ದರು. ಆರೋಗ್ಯ ಸೇತು ಆ್ಯಪ್ನಲ್ಲಿ ಈ ವ್ಯಕ್ತಿಗೆ ಪಾಸಿಟಿವ್ ಬಂದಿದೆ ಎಂದು ಅಪ್ಲೋಡ್ ಆಗಿತ್ತು. ಅಲ್ಲದೇ ಪಾಸಿಟಿವ್ ಬಂದ ವ್ಯಕ್ತಿ ಬೈಂದೂರಿನಲ್ಲಿದ್ದಾನೆ ಎಂದು ಆ್ಯಪ್ನಲ್ಲಿ ಮಾಹಿತಿ ಅಪ್ಲೋಡ್ ಆಗಿತ್ತು.
ಬೆಳಗಾವಿ ಆರೋಗ್ಯ ಇಲಾಖೆಯಲ್ಲಿ ವಿಚಾರಿಸಿದ ನಂತರ ಈ ವದಂತಿಗೆ ಬ್ರೇಕ್ ಬಿದ್ದಿದ್ದು, ಜನತೆ ನಿರಾಳರಾಗಿದ್ದಾರೆ. ಈ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆ ನೆಗೆಟಿವ್ ಬಂದಿದೆ ಎಂಬುದು ಖಾತ್ರಿಯಾಗಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಮತ್ತೊಮ್ಮೆ ಪರೀಕ್ಷೆಗಾಗಿ ಈ ಬೈಂದೂರು ವ್ಯಕ್ತಿಯ ಗಂಟಲಿನ ದ್ರವವನ್ನು ಉಡುಪಿ ಲ್ಯಾಬ್ಗೆ ರವಾನಿಸಲಾಗಿದೆ.