ETV Bharat / state

ಯುವಕ ಆತ್ಮಹತ್ಯೆಗೆ ಶರಣು: ಕುಟುಂಬಸ್ಥರಿಂದ ಪೊಲೀಸರ ವಿರುದ್ಧ ಕಿರುಕುಳ ಆರೋಪ - ಪೊಲೀಸರ ದೌರ್ಜನ್ಯದಿಂದ ಮನನೊಂದು ಯುವಕ ಆತ್ಮಹತ್ಯೆ

ಯುವಕನೊಬ್ಬನ ಮೃತದೇಹ ರೈಲು ಹಳಿಯಲ್ಲಿ ಪತ್ತೆಯಾಗಿರುವ ಘಟನೆ ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾಗೂರು ಕಿರಿಮಂಜೇಶ್ವರ ಕಳ್ಳಂಗಡಿ ವ್ಯಾಪ್ತಿಯಲ್ಲಿ ನಡೆದಿದೆ.

A young man commits suicide by police brutality
ರಾಮ ಪೂಜಾರಿ  ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
author img

By

Published : Jan 22, 2020, 11:00 AM IST

ಉಡುಪಿ: ಯುವಕನೊಬ್ಬನ ಮೃತದೇಹ ರೈಲು ಹಳಿಯಲ್ಲಿ ಪತ್ತೆಯಾಗಿರುವ ಘಟನೆ ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾಗೂರು ಕಿರಿಮಂಜೇಶ್ವರ ಕಳ್ಳಂಗಡಿ ವ್ಯಾಪ್ತಿಯಲ್ಲಿ ನಡೆದಿದೆ.

ಯುವಕ ಆತ್ಮಹತ್ಯೆಗೆ ಶರಣು: ಪೊಲೀಸರ ವಿರುದ್ಧ ಕುಟುಂಬಸ್ಥರ ಆಕ್ರೋಶ

ರಾಮ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ. ಓಮ್ನಿ ಚಾಲಕನಾಗಿದ್ದ ಈತನ ಮೇಲೆ ಯುವತಿಯೊಬ್ಬಳು ತನಗೆ ಕಿರುಕುಳ ನೀಡುತ್ತಿದ್ದ ಎಂದು ದೂರು ನೀಡಿದ್ದಳು. ಆಕೆ ನೀಡಿದ ದೂರಿನ ಅನ್ವಯ ಗಂಗೊಳ್ಳಿ ಪೊಲೀಸರು ವಿಚಾರಣೆಗಾಗಿ ಕರೆದೊಯ್ದಿದ್ದರು. ಬಳಿಕ ಅಲ್ಲಿಂದ ಕುಂದಾಪುರ ಎಎಸ್ಪಿ ಕಚೇರಿಗೆ ಕರೆದೊಯ್ದು ತಡರಾತ್ರಿಯವರೆಗೂ ವಿಚಾರಣೆ ನಡೆದಿತ್ತು. 9 ಗಂಟೆಗೆ ರಾಮನ ಸೋದರನಿಗೆ ಕರೆ ಮಾಡಿದ ಪೊಲೀಸರು, ಬೈಂದೂರು ಪೊಲೀಸ್ ಠಾಣೆಗೆ ಬಂದು ಆತನನ್ನು ಕರೆದೊಯ್ಯಲು ತಿಳಿಸಿದ್ದರು ಎನ್ನಲಾಗಿದೆ.

ತಡರಾತ್ರಿ ಸುಮಾರು 11.30ಕ್ಕೆ ಮನೆಗೆ ಕರೆದುಕೊಂಡು ಬರಲಾಗಿತ್ತು. ಬೆಳಿಗ್ಗೆ ಮನೆಯಿಂದ ರಾಮ ಪೂಜಾರಿ ಕಾಣೆಯಾಗಿದ್ದಾನೆ. ಮುಂಜಾನೆ ಸುಮಾರು 7.30ರ ಬಳಿಕ ಕಿರಿಮಂಜೇಶ್ವರದ ರೈಲು ಹಳಿ ಬಳಿ ರಾಮ ಪೂಜಾರಿ ದೇಹ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಲ್ಲದೆ ಸಮೀಪದಲ್ಲಿ ಆತನ ಬೈಕ್ ಕೂಡ ಪತ್ತೆಯಾಗಿದೆ.

ಬೈಂದೂರಿನಲ್ಲಿ ದಾಖಲಾದ ಪ್ರಕರಣಕ್ಕೆ ಗಂಗೊಳ್ಳಿ ಪೊಲೀಸರು ಮಫ್ತಿಯಲ್ಲಿ ಬಂದು ರಾಮ ಪೂಜಾರಿಯನ್ನು ಕರೆದೊಯ್ದಿದ್ದು, ಆತನ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಚೈನ್, ಮೊಬೈಲ್ ಕಿತ್ತಿಟ್ಟುಕೊಳ್ಳಲಾಗಿದೆ ಎಂದು ಮೃತನ ಸಂಬಂಧಿಗಳು ಆರೋಪಿಸಿದ್ದಾರೆ. ಪೊಲೀಸರ ದೌರ್ಜನ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾನೂನು ಕೈಗೆತ್ತಿಕೊಂಡ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಮ ಪೂಜಾರಿ ವಿರುದ್ಧ ದೂರು ನೀಡಿದವರ ಪೂರ್ವಾಪರ ವಿಚಾರಣೆ ನಡೆಸಬೇಕು. ಆತ್ಮಹತ್ಯೆಯೇ ಆಗಿದ್ದರೆ ಅದಕ್ಕೆ ಪ್ರಚೋದನೆ‌ ನೀಡಿದವರ ಮೇಲೆ ಕ್ರಮವಾಗಬೇಕು. ತಮಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಕುಟುಂಬಸ್ಥರು ಪಟ್ಟು ಹಿಡಿದ್ದಾರೆ.

Intro:Filename_train suicide pkg

Anchor:ವಿಚಾರಣೆಗೆಂದು ಪೊಲೀಸ್ ಠಾಣೆಗೆ ಯುವಕನೋರ್ವನನ್ನು ಠಾಣೆಗೆ ಕರೆದೊಯ್ದಿದ್ದು ನಂತ್ರ ಆತ ತಡರಾತ್ರಿ ಮಾನೆಗೆ ಬಂದಿದ್ದ. ಮುಂಜಾನೆ ಆತನ ಶವವು ಛಿದ್ರಗೊಂಡ ಸ್ಥಿತಿಯಲ್ಲಿ ರೈಲು ಹಳಿ ಮೇಲೆ ಪತ್ತೆಯಾದ ಘಟನೆ ನಡೆದಿದೆ. ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾಗೂರು ಕಿರಿಮಂಜೇಶ್ವರ ಕಳ್ಳಂಗಡಿ ಎಂಬಲ್ಲಿ ಯುವಕನ ಶವ ಪತ್ತೆಯಾಗಿದ್ದು ಪೊಲೀಸರ ವಿರುದ್ಧ ಯುವಕನ ಕುಟುಂಬಿಕರು ಆಕ್ರೋಷ ವ್ಯಕ್ತಪಡಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

V1ಈತನೇ ರಾಮ ಪೂಜಾರಿ ಆಟೋ , ಓಮ್ನಿ ಚಾಲಕನಾಗಿ ದುಡಿಯುತ್ತಿದ್ದ. ಈತನ ಮೇಲೆ ಯುವತಿಯೊಬ್ಬಳು ತನಗೆ ಕಿರುಕುಳ ನೀಡುತ್ತಿದ್ದ ಬಗ್ಗೆ ದೂರು ನೀಡಿದ್ದಳು. ಆಕೆ ನೀಡಿದ ದೂರಿನ ಅನ್ವಯ ಗಂಗೊಳ್ಳಿ ಪೊಲೀಸರು ರಾಮನನ್ನು ವಿಚಾರಣೆಗಾಗಿ ಕರೆದೊಯ್ದಿದ್ದರು. ಬಳಿಕ ಅಲ್ಲಿಂದ ಕುಂದಾಪುರ ಎಎಸ್ಪಿ ಕಚೇರಿಗೆ ಕರೆದೊಯ್ದು ತಡರಾತ್ರಿಯವರೆಗೂ ವಿಚಾರಣೆ ನಡೆದಿತ್ತು. 9 ಗಂಟೆಗೆ ರಾಮನ ಸೋದರನಿಗೆ ಕರೆ ಮಾಡಿದ ಪೊಲೀಸರು ಬೈಂದೂರು ಪೊಲೀಸ್ ಠಾಣೆಗೆ ಬಂದು ಆತನನ್ನು ಕರೆದೊಯ್ಯಲು ತಿಳಿಸಿದರು ಎನ್ನಲಾಗಿದೆ. ಅಂತೆಯೇ ಸೋದರ ಅಲ್ಲಿಗೆ ತೆರಳಿ ತಡರಾತ್ರಿ ಸುಮಾರು 11.30ಕ್ಕೆ ರಾಮನನ್ನು ಮನಗೆ ಕರೆದುಕೊಂಡು ಬಂದಿದ್ದರಂತೆ. ಬೆಳಿಗ್ಗೆ ಮನೆಯಿಂದ ಔ ಕಾಣೆಯಾಗಿದ್ದಾನೆ.ಮುಂಜಾನೆಸುಮಾರು 7.30ರ ಬಳಿಕ ಕಿರಿಮಂಜೇಶ್ವರದ ರೈಲು ಹಳಿ ಬಳಿ ರಾಮ ಪೂಜಾರಿ ಶವವಾಗಿ ಪತ್ತೆಯಾಗಿದೆ.ಸಮೀಪದಲ್ಲಿ ರಾಮ ಪೂಜಾರಿ ಓಡಾಡುವ ಕೂಡ ಬೈಕ್ ಪತ್ತೆಯಾಗಿತ್ತು. ಹಳಿಯ ಪಕ್ಕದಲ್ಲಿ ಬೈಕ್ ಪತ್ತೆಯಾಗಿರುವುದರಿಂದ ರಾಮ ಅಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.ಬೈಂದೂರಿನಲ್ಲಿ ದಾಖಲಾದ ಪ್ರಕರಣಕ್ಕೆ ಗಂಗೊಳ್ಳಿ ಪೊಲೀಸರು ಮಫ್ತಿಯಲ್ಲಿ ಬಂದು ರಾಮನನ್ನು ಕರೆದೊಯ್ದಿದ್ದು ಮಾತ್ರವಲ್ಲದೇ ಒಂದಷ್ಟು ಪೊಲೀಸರು ರಾಮನ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ.ಪೊಲೀಸರ ದೌರ್ಜನ್ಯದಿಂದ ನೊಂದು ರಾಮ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಿಕರು ಆರೋಪಿಸಿದ್ದಾರೆ. ರಾಮ ಪೂಜಾರಿಯ ಚೈನ್, ಮೊಬೈಲ್ ಕಿತ್ತಿಟ್ಟುಕೊಳ್ಳಲಾಗಿದೆ ಮೃತನ ಸಂಬಂಧಿಗಳು ಆರೋಪಿಸಿದ್ದಾರೆ.

Byte _ಶೇಖರ್ ಮೃತ ವ್ಯಕ್ತಿಯ ಸಹೋದರ ( ಕೆಂಪು ಟೀ ಶರ್ಟ್)

V2_ಕಾನೂನು ಕೈಗೆತ್ತಿಕೊಂಡ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು. ರಾಮ ಪೂಜಾರಿ ವಿರುದ್ಧ ದೂರು ನೀಡಿದವರ ಪೂರ್ವಾಪರ ವಿಚಾರಣೆ ನಡೆಸಬೇಕು. ರಾಮ ಪೂಜಾರಿಯದ್ದು ಆತ್ಮಹತ್ಯೆಯೇ ಆಗಿದ್ದರೆ ಅದಕ್ಕೆ ಪ್ರಚೋದನೆ‌ ನೀಡಿದವರ ಮೇಲೆ ಕ್ರಮವಾಗಬೇಕು. ತಮಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಕುಟುಂಬಿಕರು ಪಟ್ಟು ಹಿಡಿದ್ದಾರೆ ಸ್ಥಳಕ್ಕೆ ಭೇಟಿ ನೀಡಿದ್ದ ಹೆಚ್ಚುವರಿ‌ಎಸ್ಪಿ ಕುಮಾರ್ ಚಂದ್ರ,ಇಲಾಖಾ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ಮೃತ ಕುಟುಂಬದ ವರಿಗೆ ನೀಡಿದ್ದಾರೆ.ಪ್ರೇಮದ ವಿಚಾರಇಟ್ಟುಕೊಂಡು ಅದನ್ನು ತೋರಿಸಿ ಬೆದರಿಸುತ್ತಿದ್ದಾನೆ ಎಂದು ಯುವತಿಯೊಬ್ಬಳು ದೂರು ನೀಡಿದ್ದಳು. ಆಕೆ ನೀಡಿದ ದೂರಿನ ಹಿನ್ನೆಲೆ ರಾಮ ಪೂಜಾರಿಯನ್ನು ಕರೆಯಿಸಿ ವಿಚಾರಣೆ ನಡೆಸಿದ್ದೇವೆ. ಆತನ ಬಳಿಯಿದ್ದ ಮೊಬೈಲ್ ಫೋನ್ ಹಾಗೂ ಮೆಮೊರಿ ಕಾರ್ಡಿನಲ್ಲಿ ಆಕೆ ಹೇಳಿದಂತೆ ಸಾಕ್ಷಿ ಲಭಿಸಿತ್ತು. ಯುವತಿ ಪ್ರಕರಣ ದಾಖಲು ಮಾಡಿದಲ್ಲಿ ತನಗೆ ಸಮಸ್ಯೆಯಾಗುವ ಬಗ್ಗೆ ತಿಳಿಸಿದ್ದರಿಂದ ರಾಮ ಪೂಜಾರಿ ಮೇಲೆ ಕೇವಲ ಪೆಟ್ಟಿ ಕೇಸು ದಾಖಲಿಸಿದ್ದು ಮೆಮೊರಿ ಕಾರ್ಡ್ ವಶಪಡಿಸಿಕೊಂಡು ಕಾನೂನು ಪ್ರಕಾರವಾಗಿ ಹೇಳಿಕೆ ಪಡೆದು ಆತನ ಸೋದರ ಜೊತೆ ಮನೆಗೆ ಕಳಿಸಲಾಗಿತ್ತು ಅನ್ನೊ ಮಾಹಿತಿ ಪೊಲೀಸರು ನೀಡಿದ್ದಾರೆ. ಮಂಗಳವಾರ ಮುಂಜಾನೆ ರಾಮ ಪೂಜಾರಿ ಶವ ರೈಲು ಹಳಿಯಲ್ಲಿ ಪತ್ತೆಯಾಗಿದ್ದು ಈ ಬಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. ಅಲ್ಲದೇ ಈ ಪ್ರಕರಣದಲ್ಲಿ ಯಾವುದೇ ಸಂದೇಹವಿದ್ದದಲ್ಲಿ ದೂರು ನೀಡಿದ್ರೆ ದ ಅಂತವರ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳುವುದಾಗಿ ಪೊಲೀಸರು ಅಧಿಕಾರಿಗಳು ಹೇಳಿದ್ದಾರೆ.ಅದ್ರೆ ದೂರು ನೀಡಿರುವ ಕುಟುಂಬ ಸ್ಥರು ಹಾಗೂ ಬಿಲ್ಲವ ಸಂಘಟನೆ ಮುಖಂಡರು ಎಎಸ್ಪಿ ಹರೀ ರಾಮ್ ಶಂಕರ ಹೆಸರನ್ನು ದೂರಿನಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿ ಬೈಂದೂರು ಠಾಣೆ ಎದುರು ರಾತ್ರಿ ಕೂಡ ಪ್ರತಿಭಟನೆ ಯನ್ನು ಮುಂದುವರಿಸಿದ್ದಾರೆ.

Byte _ಮಹೇಂದ್ರ ,ಸ್ಥಳೀಯ ರು( white shirt)

V3_ಸದ್ಯ ಬೈಂದೂರು ಠಾಣೆ ಯಲ್ಲಿ‌ ಮೃತನ ಕುಟುಂಬದ ವರು ದೂರು ನೀಡಿದ್ದಾರೆ.ಮೃತ ರಾಮ ಪೂಜಾರಿ ಪೊಲೀಸ್ ದೌಜನ್ಯ ನೊಂದು ಆತ್ಮಹತ್ಯೆ ಮಾಡಿಕೊಂಡನೋ,ಯುವತಿ ನೀಡಿದ್ದ ದೂರಿನಿಂದ ಮಾನಹಾನಿಗೆ ಹೆದರಿ ನೊಂದು ಆತ್ಮಹತ್ಯೆ ಹತ್ಯೆ ಮಾಡಿಕೊಂಡಿವೊದೊ ಅನ್ನೊ ಸತ್ಯ ಪೊಲೀಸರ ತನಿಖೆ ಯಿಂದ ಹೊರಬರಬೇಕಿದೆ.ಕುಟುಂಬ ಹಾಗೂ ಸ್ಥಳೀಯ ಅಹೊರಾತ್ರಿ ಪ್ರತಿಭಟನೆ ಯಿಂದ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಸಾವಿನ ಸತ್ಯ ಬೆಳಕಿಗೆ ಬಂದು ನ್ಯಾಯ ಸಿಗುತ್ತಾ ಕಾದುನೋಡಾಬೇಕಿದೆ.Body:TrainConclusion:Train
ETV Bharat Logo

Copyright © 2025 Ushodaya Enterprises Pvt. Ltd., All Rights Reserved.