ಉಡುಪಿ: ತೋಟಕ್ಕೆ ಮೇಯಲು ಬಂದ ಹಸುಗಳ ಮೇಲೆ ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಬೈಂದೂರು ತಾಲೂಕಿನ ಬೆಳ್ಳಾಲ ಗ್ರಾಮದಲ್ಲಿ ಶನಿವಾರ ನಡೆದಿದೆ. ಬೆಳ್ಳಾಲ ಗ್ರಾಮದ ಅಂಗಡಿ ಜಡ್ಡು ನಿವಾಸಿ ನರಸಿಂಹ ಎಂಬಾತ ಕೋವಿಯಿಂದ ಹಸುಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಇಲ್ಲಿನ ಗುಲಾಬಿ ಎಂಬವರ ಹಸುಗಳು ಮೇಯುತ್ತಾ ನರಸಿಂಹ ಎಂಬವರ ತೋಟಕ್ಕೆ ಬಂದಿದೆ. ಇದರಿಂದ ಕೋಪಗೊಂಡ ತೋಟದ ಮಾಲೀಕ ನರಸಿಂಹ ಹಸುಗಳನ್ನು ಗುಂಡಿಕ್ಕಿ ಕೊಂದಿದ್ದಾನೆ. ಇದರಿಂದಾಗಿ ಎರಡು ಹಸುಗಳು ಸಾವನ್ನಪ್ಪಿವೆ. ಒಟ್ಟು ಆರು ಹಸುಗಳು ಗಾಯಗೊಂಡಿವೆ. ಇದುವರೆಗೆ ನಾಲ್ಕು ಹಸುಗಳನ್ನು ಹತ್ಯೆ ಮಾಡಿರುವುದಾಗಿ ಮಹಿಳೆ ದೂರಿದ್ದಾರೆ.
ಅಲ್ಲದೇ ಈ ಸಂಬಂಧ ಆರೋಪಿ ನರಸಿಂಹ ಹಸುವಿನ ಮಾಲೀಕರಿಗೂ ಜೀವ ಬೆದರಿಕೆ ಹಾಕಿದ್ದಾರೆ. ಮಾತ್ರವಲ್ಲದೇ ಮಾಲೀಕರ ತಲೆಗೆ ಕೋವಿಯಿಂದ ಗುರಿ ಇಟ್ಟು ಕೊಲ್ಲುವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಮಹಿಳೆಯು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ನರಸಿಂಹ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ: ತುಂಗಾ ನದಿ ನಡುಗಡ್ಡೆಯಲ್ಲಿ ಸಿಲುಕಿದ್ದ ಮೂವರ ರಕ್ಷಣೆ