ಉಡುಪಿ: ಸಮುದ್ರದಲ್ಲಿ ಸಿಲುಕಿಕೊಂಡು ದಡ ಸೇರಲಾರದೆ ಕಳೆದ 40 ಗಂಟೆಯಿಂದ ಪರದಾಡುತ್ತಿರುವ 9 ಮಂದಿಯನ್ನು ರಕ್ಷಿಸಲಾಗಿದೆ.
ಕಾಪು ದೀಪಸ್ತಂಭದಿಂದ 13 ನಾಟಿಕಲ್ ಮೈಲಿ ದೂರದಲ್ಲಿ ಕೋರಮಂಡಲ ಟಗ್ ಬೋಟ್ನಲ್ಲಿ ಎಂಆರ್ಪಿಎಲ್ನ 9 ಮಂದಿ ಗುತ್ತಿಗೆ ನೌಕರರು ಸಿಲುಕಿಕೊಂಡಿದ್ದರು. ಅಲ್ಲಿಂದಲೇ ಕರಾವಳಿ ಕಾವಲು ಪಡೆ ಸಿಬ್ಬಂದಿಗೆ ವಿಡಿಯೋ ರವಾನೆ ಮಾಡಿದ್ದು, ಆಹಾರ, ನೀರು ಖಾಲಿಯಾಗುತ್ತಿದೆ ನಮ್ಮನ್ನು ಕಾಪಾಡಿ ಎಂದು ಅಳಲು ತೋಡಿಕೊಂಡಿದ್ದರು.
ಇದನ್ನೂ ಓದಿ : ಅರಬ್ಬೀ ಸಮುದ್ರದಲ್ಲಿ ಸಿಲುಕಿರುವ ಬೋಟ್.. ನೌಕಾಪಡೆ ಹೆಲಿಕಾಪ್ಟರ್ ಮೂಲಕ ನೌಕರರ ರಕ್ಷಣೆಗೆ ಚಿಂತನೆ
ಟಗ್ ಬೋಟ್ ಸಿಲುಕಿಕೊಂಡಿರುವ 2 ಕಿ.ಮೀ ದೂರದಲ್ಲಿ ಕೋಸ್ಟ್ ಗಾರ್ಡ್ ಬೋಟ್ಗಳಿದ್ದವು. ಇದೀಗ ಹೆಲಿಕಾಪ್ಟರ್ ಹಾಗೂ ಕೋಸ್ಟ್ ಗಾರ್ಡ್ ಸ್ಪೀಡ್ ಬೋಟ್ ಬಳಸಿ 9 ಮಂದಿಯ ಪ್ರಾಣ ರಕ್ಷಿಸಲಾಗಿದೆ. ಮುಲ್ಲಾ ಖಾನ್, ಗೌರವ್ ಕುಮಾರ್, ಶಂತನು, ಅಹಮ್ಮದ್ ರಾಹುಲ್, ದೀಪಕ್, ಪ್ರಶಾಂತ್, ತುಷಾರ್, ಲಕ್ಷ್ಮೀನಾರಾಯಣ ಎಂಬುವರನ್ನು ರಕ್ಷಣೆ ಮಾಡಲಾಗಿದೆ.
ಈ 9 ಮಂದಿಯಲ್ಲಿ ಐವರನ್ನು ಹೆಲಿಕಾಪ್ಟರ್ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ತಂದು, ಬಳಿಕ ಎನ್ಎಂಪಿಟಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ನಾಲ್ವರನ್ನು ಕೋಸ್ಟ್ ಗಾರ್ಡ್ ಬೋಟ್ನಲ್ಲಿ ಎನ್ಎಂಪಿಟಿಗೆ ಕರೆದುಕೊಂಡು ಬರಲಾಗುತ್ತಿದೆ.