ಉಡುಪಿ: ಮಹಾರಾಷ್ಟ್ರದಿಂದ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗೆ ಹೊರಟ 30 ಮಂದಿ ನಿಪ್ಪಾಣಿಯಲ್ಲಿ ಸಿಲುಕಿದ್ದಾರೆ. ಉಡುಪಿಯ ಕುಕ್ಕೆಹಳ್ಳಿ ನಿವಾಸಿಯಾಗಿರುವ 7 ತಿಂಗಳ ಗರ್ಭಿಣಿ ದೀಪಿಕಾ ಶೆಟ್ಟಿ ಕಳೆದ ಎರಡು ದಿನಗಳಿಂದ ಬಸ್ನಲ್ಲೇ ತಂಗಿದ್ದಾರೆ.
ಕೊಲ್ಹಾಪುರ ಪೆಟ್ರೋಲ್ ಪಂಪ್ನಲ್ಲಿಯೇ ಎರಡು ದಿನ ಕಳೆದ 30 ಜನ, ಕೊಲ್ಹಾಪುರ ಲಾಡ್ಜ್ನಿಂದ ರಾತ್ರಿ 1.30 ಕ್ಕೆ ಜನರನ್ನು ಪೊಲೀಸರು ಖಾಲಿ ಮಾಡಿಸಿದ್ದಾರೆ. ಮಹಾರಾಷ್ಟ್ರ ಪಾಸ್ ಪಡೆದು ಕರಾವಳಿ ಕಡೆ ಹೊರಟಿದ್ದ 30 ಜನರಿಗೆ ಸೇವಾ ಸಿಂಧು ಪಾಸ್ ಇಲ್ಲದೆ ಕರ್ನಾಟಕ ಪ್ರವೇಶ ನಿರಾಕರಿಸಲಾಗಿದೆ.
ಬೆಳಗಾವಿ ಪೊಲೀಸರಿಂದ ಪ್ರವೇಶ ನಿರಾಕರಿಸಲಾಗಿದೆ. ಏಳು ತಿಂಗಳ ಗರ್ಭಿಣಿ ಕುಕ್ಕೆಹಳ್ಳಿ ನಿವಾಸಿಯಾಗಿದ್ದು, ಗರ್ಭಿಣಿಯನ್ನು ಉಡುಪಿಗೆ ಕಳುಹಿಸಿಕೊಡಲು ಒತ್ತಾಯಿಸಲಾಗಿದೆ. ಇನ್ನು ಉಡುಪಿಯಲ್ಲಿ ಕ್ವಾರಂಟೈನ್ಗೆ ಸಿದ್ಧ ಎಂದು ಗರ್ಭಿಣಿ ಒಪ್ಪಿಕೊಂಡಿದ್ದು ಉಡುಪಿಗೆ ಕಳುಹಿಸಿಕೊಡಲು ವಿನಂತಿಸಿದ್ದಾರೆ.