ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದ್ದು, ಮಾಸ್ಕ್ ನಿಯಮಾವಳಿ ಉಲ್ಲಂಘಿಸುವವರ ಮೇಲೆ ದಂಡ ವಿಧಿಸುವ ಪ್ರಕ್ರಿಯೆ ಮುಂದುವರೆದಿದೆ. 2020 ಮಾರ್ಚ್ನಿಂದ ಕೊರೊನಾ ಆರಂಭವಾದ ಬಳಿಕ ಈವರೆಗೆ ಜಿಲ್ಲೆಯಲ್ಲಿ ಒಟ್ಟು 54,282 ಪ್ರಕರಣಗಳು ದಾಖಲಾಗಿದ್ದು, 60,08,470 ರೂ. ದಂಡ ಸಂಗ್ರಹಿಸಲಾಗಿದೆ.
ನಗರಸಭೆ, ಪುರಸಭೆ ಮತ್ತು ಪ.ಪಂ. ವ್ಯಾಪ್ತಿಯಲ್ಲಿ 5,615 ಪ್ರಕರಣಗಳು ದಾಖಲಾಗಿದ್ದು, 9,73,100 ರೂ. ದಂಡ ಸಂಗ್ರಹಿಸಲಾಗಿದೆ. ಪಂಚಾಯತ್ ವ್ಯಾಪ್ತಿಯಲ್ಲಿ 5,487 ಪ್ರಕರಣಗಳು ದಾಖಲಾಗಿದ್ದು, 5,52,270 ರೂ. ದಂಡ ಸಂಗ್ರಹಿಸಲಾಗಿದೆ.
ಅಬಕಾರಿ ಇಲಾಖೆ ವ್ಯಾಪ್ತಿಯಲ್ಲಿ 2,153 ಪ್ರಕರಣಗಳು ದಾಖಲಾಗಿದ್ದು, 2,15,400 ರೂ. ದಂಡ, ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ 1,429 ಪ್ರಕರಣಗಳು ದಾಖಲಾಗಿದ್ದು, 1,43,450 ರೂ. ದಂಡ ಸಂಗ್ರಹಿಸಲಾಗಿದೆ.
ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ 39,273 ಪ್ರಕರಣ ದಾಖಲಾಗಿದ್ದು, 40,93,650 ರೂ. ದಂಡ ಹಾಗೂ ಮೀನುಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ 90 ಪ್ರಕರಣಗಳು ದಾಖಲಾಗಿದ್ದು, 9 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಲ್ಲಿ 86 ಪ್ರಕರಣಗಳು ದಾಖಲಾಗಿದ್ದು, 8,600 ರೂ.ದಂಡ ಸಂಗ್ರಹಿಸಲಾಗಿದೆ. ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ 8 ಪ್ರಕರಣಗಳು ದಾಖಲಾಗಿದ್ದು, 800 ರೂ. ದಂಡ ಹಾಗೂ ಎಪಿಎಂಸಿ ವ್ಯಾಪ್ತಿಯಲ್ಲಿ 121 ಪ್ರಕರಣಗಳು ದಾಖಲಾಗಿದ್ದು, 12,200 ರೂ. ದಂಡ ಸಂಗ್ರಹವಾಗಿದೆ.
ನಿನ್ನೆ(ಶುಕ್ರವಾರ) ಜಿಲ್ಲೆಯಲ್ಲಿ 127 ಪ್ರಕರಣಗಳು ದಾಖಲಾಗಿದ್ದು, 12,700 ರೂ. ದಂಡ ಸಂಗ್ರಹ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: 2 ಸಾವಿರ ಕೋಟಿ ರೂ. ನಷ್ಟದತ್ತ ರಾಜ್ಯ ಸಾರಿಗೆ ನಿಗಮಗಳು!