ಉಡುಪಿ: ಜಿಲ್ಲೆಯ ಬೈಂದೂರು ತಾಲೂಕು ಗೋಳಿಹೊಳೆ ಗ್ರಾಮದಲ್ಲಿ ಭಾರೀ ಗಾತ್ರದ ಹೆಬ್ಬಾವು ರಕ್ಷಣೆ ಮಾಡಲಾಗಿದೆ.
ಗ್ರಾಮದ ರವಿ ಶೆಟ್ಟಿ ಎಂಬವರ ತೋಟದಲ್ಲಿ ಭಾರೀ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು, ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಮೀಸಲು ಅರಣ್ಯದಲ್ಲಿ ಬಿಡಲಾಗಿದೆ. ತೋಟದಲ್ಲಿ ನಾಯಿಯನ್ನು ಹಿಡಿದು ನುಂಗುತ್ತಿದ್ದ ಸಂದರ್ಭದಲ್ಲಿ ರವಿ ಶೆಟ್ಟಿಯವರು ಹಾವಿನ ಬಾಯಿಂದ ನಾಯಿಯನ್ನು ಬಿಡಿಸಿದ್ದಾರೆ. ಸುಮಾರು 20 ಅಡಿ ಉದ್ದ 50 ಕೆಜಿಯಷ್ಟು ಭಾರ ಇರುವ ಹಾವಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಹಿಡಿಯಲಾಗಿದೆ.
ಗೋಳಿಹೊಳೆ ವಿಭಾಗಿಯ ಪ್ರಭಾರ ಅರಣ್ಯ ರಕ್ಷಕ ರಾಜೀವ. ಎಸ್ ಗೌಡರ ಸಹಾಯದೊಂದಿಗೆ ಮೀಸಲು ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.