ETV Bharat / state

ಕೊರೊನಾ ಮುಕ್ತವಾಗಿಸಲು ಉಡುಪಿ ಪುತ್ತಿಗೆ ಮಠದಿಂದ 10 ಲಕ್ಷ ದೇಣಿಗೆ - donation from Udupi Padatta Math

ಪ್ರಾಚೀನ ಮೌಲ್ಯಗಳನ್ನು ಬದಿಗಿಟ್ಟು, ಅನಗತ್ಯ ಪ್ರಾಣಿ ಸಂಹಾರದಿಂದ ಕೊರೊನಾ ಬಂದಿದೆ. ಈ ವೈರಸ್​ ಜಗತ್ತನ್ನೇ ನಾಶಪಡಿಸಲಿದೆ ಎಂದು ದುಷ್ಟರಿಗೆ ಈಗ ಗೊತ್ತಾಗಿದೆ ಎಂದು ಸ್ವಾಮೀಜಿ ಹೇಳಿದರು.

10 lakh donation from Udupi Padatta Math
ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ
author img

By

Published : Apr 6, 2020, 9:12 PM IST

ಉಡುಪಿ: ದೇಶಾದ್ಯಂತ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಅದನ್ನು ಮುಕ್ತ ಮಾಡಲು ಮಠದ ವತಿಯಿಂದ 10 ಲಕ್ಷ ದೇಣಿಗೆ ಕೊಡುತ್ತಿದ್ದೇವೆ ಎಂದು ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಕೊರೊನಾ ವೈರಸ್​​ ಅನ್ನು ಉದ್ದೇಶಪೂರ್ವಕವಾಗಿ ಪಸರಿಸಲಾಗುತ್ತಿದೆ. ವೈರಸ್​​ ನರಕಾಸುರನಂತೆ ಭಾಸವಾಗುತ್ತಿದೆ. ನರಕಾಸುರನ ಸಂಹರಿಸಲು ಕೃಷ್ಣನ ಅವತಾರ ಎತ್ತಬೇಕಿದೆ. ಮಾನವ ಸಮುದಾಯ ಮಾಡಿದ ತಪ್ಪುಗಳಿಂದ ಈ ಪರಿಸ್ಥಿತಿ ಬಂದಿದೆ ಎಂದರು.

ಈಗಾಗಲೇ ವಿಶ್ವದ ಧಾರ್ಮಿಕ ನಾಯಕರ ಜೊತೆ ಚರ್ಚೆ ನಡೆಸಿದ್ದೇನೆ. ಕೊರೊನಾ ವಿರುದ್ಧ ದೂರಗಾಮಿ ಆಲೋಚನೆ ಅಗತ್ಯ ಇದೆ ಎಂದ ಅವರು, ಕೊರೊನಾದಿಂದ ಪುತ್ತಿಗೆ ಮಠದ ವಿದೇಶಿ ಬ್ರಾಂಚ್​​​ಗಳಿಗೆ ತೊಂದರೆಯಾಗಿದೆ. ಅಮೆರಿಕ, ಲಂಡನ್​​ನ 11 ಶಾಖೆಗಳನ್ನು ಮುಚ್ಚಿದ್ದೇವೆ. ಮಠದ ಸಿಬ್ಬಂದಿ, ಅರ್ಚಕರು ಗೊಂದಲದಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.