ETV Bharat / state

ಶಾಸಕ ಗೌರಿ ಶಂಕರ್ ಮೇಲಿನ ಆರೋಪ ಸಾಬೀತುಪಡಿಸಲಿ: ಜೆಡಿಎಸ್​ನ ಕೆಂಪರಾಜು ಆಗ್ರಹ - undefined

ಕಾಂಗ್ರೆಸ್ ಪಕ್ಷದ ಆರ್. ರಾಜೇಂದ್ರ ಅವರು ತುಮಕೂರಿನ ಗ್ರಾಮಾಂತರ ಶಾಸಕ ಗೌರಿ ಶಂಕರ್ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಅವುಗಳನ್ನು ದಾಖಲೆ ಸಮೇತ ಸಾಬೀತು ಪಡಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ರಾಜ್ಯ ಜೆಡಿಎಸ್​ನ ಯುವ ಘಟಕದ ಉಪಾಧ್ಯಕ್ಷ ಕೆಂಪರಾಜು ಎಚ್ಚರಿಸಿದ್ದಾರೆ.

ಉಪಾಧ್ಯಕ್ಷ ಕೆಂಪರಾಜು
author img

By

Published : May 27, 2019, 11:39 PM IST

ತುಮಕೂರು: ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಜೆಡಿಎಸ್​ ಯುವ ಘಟಕದ ಉಪಾಧ್ಯಕ್ಷ ಕೆಂಪರಾಜು, ಕಾಂಗ್ರೆಸ್​ ಯುವ ಘಟಕದ ಉಪಾಧ್ಯಕ್ಷ ಆರ್​. ರಾಜೇಂದ್ರ ಅವರು, ತುಮಕೂರಿನ ಗ್ರಾಮಾಂತರ ಶಾಸಕ ಗೌರಿ ಶಂಕರ್ ಮೇಲೆ ಮಾಡಿರುವ ಆರೋಪಗಳನ್ನು ವಾರದ ಒಳಗೆ ದಾಖಲೆಗಳ ಸಹಿತ ಸಾಬೀತುಪಡಿಸಲಿ ಇಲ್ಲ ಕ್ಷಮೆ ಕೇಳಲಿ ಎಂದರು.

ಹೀಗೆ ಮುಂದುವರೆದರೆ ಜಿಲ್ಲೆಯಾದ್ಯಂತ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ. ಅವರು ಶಾಸಕರ ಮೇಲೆ ದಾಖಲೆ ಇಲ್ಲದೆ ಏಕವಚನದಲ್ಲಿ ಮಾತನಾಡುತ್ತಿರುವುದನ್ನು ಖಂಡಿಸುತ್ತೇನೆ. ಅವರು ಮಾಡುತ್ತಿರುವ ಆಪಾದನೆಗಳು ಎಲ್ಲವೂ ಸುಳ್ಳು. ಪದೇ ಪದೇ ಶಾಸಕರನ್ನು ಗಂಡಸಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಅವರ ತಂದೆಯ ವಿರುದ್ಧ ಗೌರಿಶಂಕರ್ ಅವರು ಗೆಲುವು ಸಾಧಿಸುವ ಮೂಲಕ ಗಂಡಸು ಎಂದು ತೋರಿಸಿದ್ದಾರೆ. ಅದನ್ನು ಅವರು ಮರೆತ್ತಿದ್ದಾರೆ ಎನಿಸುತ್ತದೆ ಎಂದರು.

ರಾಜೇಂದ್ರ ಅವರು ಯಾವುದೇ ದಾಖಲೆ ಇಲ್ಲದೆ ಮಾಡುತ್ತಿರುವ ಆರೋಪಗಳು ಇದೇ ರೀತಿ ಮುಂದುವರೆದರೆ ಜಿಲ್ಲೆಯಾದ್ಯಂತ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.

Intro:ತುಮಕೂರು: ತುಮಕೂರಿನ ಗ್ರಾಮಾಂತರ ಶಾಸಕ ಗೌರಿಶಂಕರ್ ಮೇಲೆ ಮಾಡಿರುವ ಆರೋಪಗಳಿಗೆ ಒಂದು ವಾರದ ಒಳಗೆ ದಾಖಲೆಗಳ ಮೂಲಕ ಸಾಬೀತುಪಡಿಸಲಿ, ಇಲ್ಲವಾದಲ್ಲಿ ರಾಜ್ಯ ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ ಆರ್ ರಾಜೇಂದ್ರ ಕ್ಷಮೆ ಕೇಳಲಿ, ಇಲ್ಲವಾದಲ್ಲಿ ಜಿಲ್ಲೆಯಾದ್ಯಂತ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ರಾಜ್ಯ ಜೆಡಿಎಸ್ ನ ಯುವ ಘಟಕದ ಉಪಾಧ್ಯಕ್ಷ ಕೆಂಪರಾಜು ಸೂಚಿಸಿದರು.

Body:ಶಾಸಕರ ಮೇಲೆ ದಾಖಲೆ ಇಲ್ಲದೆ ಕಾಂಗ್ರೆಸ್ ಪಕ್ಷದ ಆರ್ ರಾಜೇಂದ್ರ ಏಕವಚನದಲ್ಲಿ ಮಾತನಾಡುತ್ತಿರುವುದನ್ನು ಖಂಡಿಸುತ್ತೇನೆ. ಅವರು ಮಾಡುತ್ತಿರುವ ಆಪಾದನೆಗಳು ಎಲ್ಲವೂ ಸುಳ್ಳು.
ಪದೇ ಪದೇ ಶಾಸಕರನ್ನು ಗಂಡಸಲ್ಲ ಎಂದು ಹೇಳುತ್ತಾರೆ, ಆದರೆ ಅವರ ತಂದೆಯ ವಿರುದ್ಧ ಗೌರಿಶಂಕರ್ ಅವರು ಗೆಲುವು ಸಾಧಿಸಿರುವುದು ಮರೆತಿದ್ದಾರೆ.
ರಾಜೇಂದ್ರ ಅವರು ಯಾವುದೇ ದಾಖಲೆ ಇಲ್ಲದೆ ಮಾಡುತ್ತಿರುವ ಆರೋಪಗಳು ಇದೇ ರೀತಿ ಮುಂದುವರೆದರೆ ಜಿಲ್ಲೆಯಾದ್ಯಂತ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ.
ಮಾಜಿ ಪ್ರಧಾನ ಮಂತ್ರಿ ದೇವೇಗೌಡರು ಕೆ.ಎನ್ ರಾಜಣ್ಣ ಅವರ ಮನೆಗೆ ಭೇಟಿ ನೀಡದಿದ್ದರೂ, ಮಧುಗಿರಿಯಲ್ಲಿ ನಡೆದ ಸಭೆಯಲ್ಲಿ ಎಲ್ಲರೂ ಸಹ ವೇದಿಕೆಯ ಮೇಲೆ ಪಾಲ್ಗೊಂಡಿದ್ದರು ಎಂದು ತಿಳಿಸಿದರು.

Conclusion:ವರದಿ
ಸುಧಾಕರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.