ತುಮಕೂರು: ಅಯೋಧ್ಯೆ ತೀರ್ಪು ವಿಚಾರಕ್ಕೆ ಸಂಬಂಧಪಟ್ಟಂತೆ ಕೋರ್ಟ್‌ನಲ್ಲಿ ಯಾವ ರೀತಿಯ ತೀರ್ಮಾನ ಬರುತ್ತೋ ಕಾದು ನೋಡಬೇಕು. ಏನೇ ತೀರ್ಮಾನ ಬಂದರೂ ಅಲ್ಪಸಂಖ್ಯಾತ ಸಮುದಾಯದ ಕೆಲ ಮುಖಂಡರು ಒಪ್ಪಿಕೊಳ್ಳುತ್ತೇವೆ ಎಂದಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಪ್ರತಿಕ್ರಿಯಿಸಿದ್ರು.
ತುಮಕೂರು ತಾಲೂಕು ಅರೇಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ತೀರ್ಪು ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಈಗಾಗಲೇ ಅಯೋಧ್ಯೆಯಲ್ಲಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದೆ ಎಂದರು.
ಸುಪ್ರೀಂಕೋರ್ಟ್‌ನಲ್ಲಿ ಹೇಗೆ ತೀರ್ಪು ಬರುತ್ತದೆ ಅನ್ನೋದನ್ನು ನಾನು ಈಗಲೇ ಹೇಳೋಕೆ ಸಾಧ್ಯವಿಲ್ಲ. ತೀರ್ಪು ಸರ್ವಸಮ್ಮತವಾಗಿ ಬರುತ್ತೋ ಅಥವಾ ಏನಾದರೂ ವ್ಯತ್ಯಾಸವಾಗಿ ಬರುತ್ತೋ ಅನ್ನೋದನ್ನು ಕಾದು ನೋಡಬೇಕು ಎಂದರು.
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ಕೊಟ್ಟಿರುವಂತಹ Z+ ಭದ್ರತೆಯನ್ನು ವಾಪಸ್ ಪಡೆದುಕೊಂಡಿರುವುದು ಯೋಗ್ಯವಾದ ನಿರ್ಣಯವಲ್ಲ ಎಂದು ಅವರು ತಿಳಿಸಿದರು.