ETV Bharat / state

ತುಮಕೂರು: ಕೆಂಪಾಪುರ ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕಿಯರು ಸಾವು, ಸೃಷ್ಟಿ ಹಬ್ಬದಂದು ಮಡುಗಟ್ಟಿದ ಶೋಕ - ಈಟಿವಿ ಭಾರತ ಕನ್ನಡ

ಜಯಮಂಗಲಿ ನದಿಯಲ್ಲಿ ಈಜಾಡಲು ತೆರಳಿದ್ದ ಬಾಲಕಿಯರು- ನೀರಿನಲ್ಲಿ ಮುಳುಗಿ ಇಬ್ಬರು ಸಾವು- ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

two girls drowned in lake
ಬಾಲಕಿಯರು ಸಾವು
author img

By

Published : Dec 29, 2022, 10:23 AM IST

ತುಮಕೂರು: ಈಜಾಡಲೆಂದು ಸ್ನೇಹಿತೆಯರೊಂದಿಗೆ ತೆರಳಿದ್ದ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ಲಕ್ಷೀ ನಾರಾಯಣ ಎಂಬವರ ಮಗಳು ಬಿಂದು(9) ಹಾಗೂ ಬಾಬು ಅವರ ಮಗಳು ಪ್ರಿಯಾಂಕ(8) ಎಂಬ ಬಾಲಕಿಯರು ಸಾವನ್ನಪ್ಪಿದ್ದಾರೆ. ಸೃಷ್ಟಿ ಹಬ್ಬದ ಹಿನ್ನೆಲೆ ಶಾಲೆಗೆ ರಜೆ ಇದ್ದ ಕಾರಣ ಕೆಂಪಾಪುರ ಗ್ರಾಮದ ಐವರು ಮಕ್ಕಳು ವೀರಾಪುರ ಹಾಗೂ ಇಮ್ಮಡಗೊಂಡನಹಳ್ಳಿ ಮಧ್ಯೆ ನಿರ್ಮಿಸಿರುವ ಚೆಕ್‌ ಡ್ಯಾಂ ಸಮೀಪ ಜಯಮಂಗಲಿ ನದಿಯಲ್ಲಿ ಈಜಾಡಲು ತೆರಳಿದ್ದರು.

ಈ ಭಾಗದ ಬಹುತೇಕ ಜನರು ಹಬ್ಬದಂದು ತಮ್ಮ ಹೊಲಗಳಲ್ಲಿ ಅಡುಗೆ ತಯಾರಿಸಿ ಅಲ್ಲೇ ಸವಿಯುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ರೂಢಿ. ಅದರಂತೆ ಈ ಮಕ್ಕಳು ಸ್ನೇಹಿತರ ಜೊತೆ ಹೊಲದ ಬಳಿ ತೆರಳಿರುತ್ತಾರೆ ಎಂದು ಪೋಷಕರು ಭಾವಿಸಿದ್ದರು. ಆದರೆ ಮಕ್ಕಳು ಹೆಣವಾಗಿ ಬಂದದ್ದು ಕಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ವಿಜಯನಗರ: ತುಂಗಾಭದ್ರಾ ನದಿಯಲ್ಲಿ ಈಜಲು ಹೋದ ಯುವಕರು ನೀರುಪಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.