ತುಮಕೂರು: ಎರಡು ಬೈಕ್ಗಳ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಮೃತಪಟ್ಟು, ಓರ್ವ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹೊನ್ನವಳ್ಳಿ ಬಳಿ ನಡೆದಿದೆ. ಮೃತರನ್ನು ಚೆಲುವರಾಜು(49) ಮತ್ತು ಅಭಿಷೇಕ್ ಎಂದು ಗುರುತಿಸಲಾಗಿದೆ. ಅಪಘಾತ ಸಂಭವಿಸಿದ ಸ್ಥಳದಲ್ಲೇ ಚೆಲುವರಾಜು ಮೃಪಟ್ಟಿದ್ದರು. ಇನ್ನು ತೀವ್ರ ಗಾಯಗೊಂಡಿದ್ದ ಸವಾರ ಅಭಿಷೇಕ್ಗೆ ತುಮಕೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾರೆ.
ಮತ್ತೊಂದು ಬೈಕ್ ಸವಾರನನ್ನು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ಇಬ್ಬರು ಗಡಿಪಾರು: ಮಟ್ಕಾ, ಜೂಜಾಟ ಸೇರಿದಂತೆ ಅನೇಕ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೂಡಗಿದ್ದ ಇಬ್ಬರನ್ನು ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದಿಂದ ಗಡಿಪಾರು ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಗಾಂಧಿ ನಗರದ ನಿವಾಸಿ ಸುನೀಲ್ ಕುಮಾರ್(54) ಹಾಗೂ ಹಳ್ಳೂರು ನಿವಾಸಿ ಅಬ್ದುಲ್ ಮುನಾಫ್ ಅಲಿಯಾಸ್ ಸ್ಟಾರ್ ಮುನ್ನಾ(48) ಎಂಬುವರನ್ನು 6 ತಿಂಗಳ ಕಾಲ ಗಡಿಪಾರು ಮಾಡಲಾಗಿದೆ.
ಸುನೀಲ್ ಹಾಗೂ ಅಬ್ದುಲ್ ಮುನಾಫ್ ಮಟ್ಕಾ, ಜೂಜಾಟ ಆಡುವ ಹಾಗೂ ಆಡಿಸುವ ಜೊತೆಗೆ ರೌಡಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಅಲ್ಲದೆ ಸಾರ್ವಜನಿಕ ಆಸ್ತಿ ಮತ್ತು ಜೀವ ಹಾನಿಪಡಿಸುವ ಕೃತ್ಯ ಸೇರಿದಂತೆ ಬೆದರಿಕೆ ಹಾಕುವ ಕೃತ್ಯಗಳಲ್ಲಿ ತೊಡಗಿಕೊಂಡಿದ್ದರು. ಕಾನೂನಿಗೆ ವಿರುದ್ಧವಾಗಿ ಇರುವ ಪ್ರಕರಣಗಳಲ್ಲಿ ಭಾಗಿಯಾಗಬಾರದೆಂದು ಪೊಲೀಸರು ಎಚ್ಚರಿಕೆ ನೀಡಿದ್ದರು.
6 ತಿಂಗಳ ಕಾಲ ಗಡಿಪಾರು: ಆದರೂ ಸಹ ಪದೇ ಪದೆ ಕಾನೂನು ಬಾಹಿರ ಚಟುವಟಿಕೆಯ ಪ್ರಕರಣಗಳಲ್ಲಿ ಭಾಗಿಯಾದ ಕಾರಣ ಶಿರಾಳಕೊಪ್ಪ ಪೊಲೀಸ್ ಠಾಣೆಯ ನಿರೀಕ್ಷಕರು ನೀಡಿದ ವರದಿಯ ಮೇರೆಗೆ ಸಾಗರ ಉಪವಿಭಾಧಿಕಾರಿಗಳು ಇಬ್ಬರನ್ನು ಮುಂದಿನ 6 ತಿಂಗಳ ಕಾಲ ಗಡಿಪಾರು ಮಾಡಲಾಗಿದೆ. ಸುನೀಲ್ ಕುಮಾರ್ ಅವರನ್ನು ಗದಗ ಜಿಲ್ಲೆಗೆ ಹಾಗೂ ಅಬ್ದುಲ್ ಮುನಾಫ್ ಅವರನ್ನು ವಿಜಯಪುರ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. ಜಿಲ್ಲೆಯಲ್ಲಿ ಇನ್ಮುಂದೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೂಡಗಿಕೊಳ್ಳುವವರಿಗೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿ, ಬಿಸಿ ಮುಟ್ಟಿಸಿದೆ.
ಇದನ್ನೂಓದಿ:ಎಕ್ಸ್‌ಪ್ರೆಸ್ ರೈಲಿನಲ್ಲಿ ಸಾಗಿಸುತ್ತಿದ್ದ ಚೀಲಗಳಲ್ಲಿ ಸ್ಫೋಟಕಗಳು ಪತ್ತೆ: ಬೆಚ್ಚಿಬಿದ್ದ ಪ್ರಯಾಣಿಕರು