ತುಮಕೂರು: ಇತ್ತೀಚೆಗೆ ತುಮಕೂರು ತಾಲೂಕು ಹೆಗ್ಗೆರೆ ಗ್ರಾಮದಲ್ಲಿ ನಡೆದಿದ್ದ ಎಟಿಎಂ ಮಷಿನ್ ಕಳ್ಳತನ ಪ್ರಕರಣ ಸಂಬಂಧ ಈವರೆಗೂ ಕಳ್ಳರ ಸುಳಿವು ಪತ್ತೆಯಾಗಿಲ್ಲ. ಕಳ್ಳರು ದರೋಡೆ ಮಾಡುವ ಸಂದರ್ಭ ಯಾವುದೇ ಸುಳಿವು ಬಿಡದೇ ಕೃತ್ಯ ಎಸಗಿರುವುದು ಇದೀಗ ಪೊಲೀಸರಿಗೆ ಸವಾಲಾಗಿದೆ.
ಸಾಮಾನ್ಯವಾಗಿ ಕಳ್ಳರು ಎಟಿಎಂ ದೋಚಿರುವ ಪ್ರರಕಣಗಳಲ್ಲಿ ಅವರ ಮೊಬೈಲ್ ಫೋನ್ಗಳೇ ಪ್ರಮುಖ ಸುಳಿವು ನೀಡುತ್ತಿದ್ದವು. ಆದರೆ ಹೆಗ್ಗೆರೆ ಪ್ರಕರಣದಲ್ಲಿ ಕಳ್ಳರು ಮೊಬೈಲ್ ಫೋನ್ ತಮ್ಮ ಜೊತೆ ತರದೆ ಚಾಣಾಕ್ಷತನ ಮೆರೆದಿದ್ದಾರೆ. ಇದರಿಂದಾಗಿ ಕಳ್ಳರ ಸೆರೆಹಿಡಿಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ 2 ಎಟಿಎಂ ಮಷಿನ್ ಕಳ್ಳತನ ಪ್ರಕರಣಗಳು ನಡೆದಿದ್ದು ಅದರಲ್ಲಿ ಒಂದು ವಿಫಲವಾಗಿದ್ದರೆ, ಇನ್ನೊಂದರಲ್ಲಿ ಲಕ್ಷಾಂತರ ರೂಪಾಯಿ ಕಳುವಾಗಿದೆ. ಈ ಕೃತ್ಯಗಳ ಹಿಂದೆ ಉತ್ತರ ಭಾರತದ ತಂಡವೊಂದು ಸಕ್ರಿಯವಾಗಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೇ ದೇಶದಲ್ಲಿ ಈ ರೀತಿ ಎಟಿಎಂ ಮಷಿನ್ ಕಳ್ಳತನ ಪ್ರಕರಣಗಳು ನಡೆದಿರುವ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಸ್ಕಿ ಉಪಚುನಾವಣೆ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತೇನೆ; ಬಿ.ವೈ. ವಿಜಯೇಂದ್ರ