ತುಮಕೂರು: ನಿರೀಕ್ಷೆಯಂತೆ ತುಮಕೂರು ಮಹಾನಗರ ಪಾಲಿಕೆ ಮೇಯರ್ ಆಗಿ ಕೃಷ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತುಮಕೂರು ಪಾಲಿಕೆ ಮೇಯರ್ ಮತ್ತು ಉಪಮೇಯರ್ಗೆ ನಡೆದ ಚುನಾವಣೆಯಲ್ಲಿ ಮೇಯರ್ ಆಗಿ ಬಿಜೆಪಿ ಕಾರ್ಪೋರೇಟ್ ಕೃಷ್ಣಪ್ಪ ಆಯ್ಕೆಯಾಗಿದ್ದು, ಉಪಮೇಯರ್ ಆಗಿ ಜೆಡಿಎಸ್ ನಾಜಿಮಾಬಿ ಆಯ್ಕೆಯಾಗಿದ್ದಾರೆ. ಸುಮಾರು 35 ಮಂದಿ ಸದಸ್ಯರು ಚುನಾವಣೆಯಲ್ಲಿ ಹಾಜರಿದ್ದು, ಮೇಯರ್ ಸ್ಥಾನ ಲಭಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಓದಿ: ಸಿಲಿಕಾನ್ ಸಿಟಿ ಭೂಗತ ಲೋಕದ ಮೇಲೆ ಸಿಸಿಬಿ ಹದ್ದಿನ ಕಣ್ಣು.. ಗ್ಯಾಂಗ್ವಾರ್ ಮಟ್ಟ ಹಾಕಲು ಖಾಕಿ ರೆಡಿ..
ಈ ವೇಳೆ, ನಗರ ಶಾಸಕ ಜ್ಯೋತಿ ಗಣೇಶ್ ಮಾತನಾಡಿದ್ದು, 12 ತಿಂಗಳಿಗೊಮ್ಮೆ ಮೇಯರ್ ಸ್ಥಾನಕ್ಕೆ ಮೀಸಲಾತಿ ಬದಲಾವಣೆ ಆಗುತ್ತದೆ. ಈ ಬಾರಿ ಪಾಲಿಕೆಗೆ ಎಸ್ಟಿ ಮೀಸಲಾತಿ ಬಂದಿದೆ. 35 ಅಭ್ಯರ್ಥಿಗಳಲ್ಲಿ ಎಸ್ಟಿ ಅಭ್ಯರ್ಥಿ ಬಿಜೆಪಿಯ ಬಿ.ಜಿ ಕೃಷ್ಣಪ್ಪ ಒಬ್ಬರೇ ಇರೋದು. ನಮ್ಮ ಪಕ್ಷದಿಂದ ಮೇಯರ್ ಆಗುತ್ತಿರೋದು ನಮಗೆ ಸಂತೋಷ ತಂದಿದೆ. 11 ವರ್ಷದ ಈಚೆಗೆ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಸಿಗುತ್ತಿದೆ. ಉಪ ಮೇಯರ್ ಸ್ಥಾನಕ್ಕೆ ನಾವು ಸ್ಪರ್ಧೆ ಮಾಡಿಲ್ಲ ಎಂದರು.
ಉಪಮೇಯರ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ:
ತುಮಕೂರು ಮಹಾನಗರ ಪಾಲಿಕೆ ಮೇಯರ್ ಆಗಿ ಬಿಜೆಪಿಯ ಕೃಷ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸರ್ಕಾರದ ಮೀಸಲಾತಿ ಅಧಿಸೂಚನೆಯನ್ವಯ ಎಸ್ಟಿ ಮೀಸಲಾತಿಯ ಸದಸ್ಯರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಸದಸ್ಯರ ಇಲ್ಲದಂತಾಗಿತ್ತು. ಹೀಗಾಗಿ ಎರಡೂ ಪಕ್ಷಗಳಿಗೂ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಅಂತಿಮವಾಗಿ ಬಿಜೆಪಿಯ ಪಕ್ಷದಲ್ಲಿದ್ದಾರೆ ಎಸ್ಟಿ ಸದಸ್ಯ ಕೃಷ್ಣಪ್ಪ ಅವರನ್ನೇ ಮೇಯರ್ ಅನ್ನಾಗಿ ಒಪ್ಪಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೊಂದೆಡೆ ಬಿಜೆಪಿ ಸಹ ಉಪಮೇಯರ್ ಸ್ಥಾನಕ್ಕೆ ಯಾವುದೇ ಸದಸ್ಯರನ್ನು ಕಣಕ್ಕಿಳಿಸಲಿಲ್ಲ. ಕಣಕ್ಕಿಳಿಸಿದ್ದರೂ ಸೋಲುವುದು ನಿಶ್ಚಿತವಾಗಿತ್ತು. ಜೆಡಿಎಸ್ನ ನಾಜಿಮಾಬಿ ಅವರನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಒಮ್ಮತದಿಂದ ಕಣಕ್ಕಿಳಿಸಿದ್ದವು. ಒಬ್ಬರೇ ಅರ್ಜಿ ಸಲ್ಲಿಸಿದ್ದರಿಂದ ನಾಜಿಮಾಬಿ ಅವರು ಉಪಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
35 ಸದಸ್ಯರ ಬೆಂಬಲದಿಂದ ನಾನು ಉಪಮೇಯರ್ ಆಗಿ ಆಯ್ಕೆಯಾಗಿದ್ದೇನೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಶ್ರೀನಿವಾಸ ಅವರ ಆಶೀರ್ವಾದದಿಂದ ನಾನು ಉಪಮೆಯರ್ ಆಗಿದ್ದೇನೆ. ತುಮಕೂರು ನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದಿದ್ದಾರೆ.